About the Author

ಲೇಖಕ ಅಮೃತ ಡಿ. ದೊಡಮನಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಯಡ್ರಾಮಿ ಗ್ರಾಮದವರು. 1965ರ ಜೂನ್ 15ರಂದು ಜನನ. ವಿದ್ಯಾರ್ಹತೆ: ಎಂ.ಎ, ಬಿ.ಇಡಿ. ಜೇವರ್ಗಿ ತಾಲೂಕಿನ ಹಿಪ್ಪರಗಾ ಎಸ್.ಎನ್. ಗ್ರಾಮದ ಸರಕಾರಿ ಪ್ರೌಢಶಾಲೆಯ ಶಿಕ್ಷಕರು. ನೂರೊಂದು ನುಡಿಗಳು (ವಚನ ಸಂಕಲನ), ನೋವಿನ ನುಡಿಗಳು (ಕವನ ಸಂಕಲನ), ಜಾತಿ ಹಲವು ಮುಖಗಳು (ವೈಚಾರಿಕ ಲೇಖನಗಳ ಸಂಗ್ರಹ), ಸರ್ದಾರ ಶರಣಗೌಡ ಇನಾಮದಾರ (ಜೀವನ ಚರಿತ್ರೆ), ಮಾತುಮೌನ (ಚಿಂತನೆಗಳು), ಗರತಿಯ ಗೋಳಾಟ, ಒಡಹುಟ್ಟಿದವರು, ನಾಲೇಜ್ ಇಲ್ಲದ ಕಾಲೇಜ್ ಗರ್ಲ್, ಭಕ್ತ ತಿರುನೀಲಕಂಠ, ತ್ಯಾಗವೀರ ತಾತ್ಯಾಟೋಪಿ ಹಾಗೂ ತಂಗಿ ತಂದ ಭಾಗ್ಯ (ನಾಟಕಗಳು), ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ, ಶಂಕರಲಿಂಗ ಪ್ರತಿಷ್ಠಾನದ ಬಸವರತ್ನ ಪ್ರಶಸ್ತಿ, ಚಿತ್ರದುರ್ಗ ಮುರುಘಾಮಠದ ಬಸವ ಕೇಂದ್ರದಿಂದ ಶರಣ ಚೇತನ ಪ್ರಶಸ್ತಿ ಸೇರಿದಂತೆ ಇತರೆ ಗೌರವಗಳು ಸಂದಿವೆ.

ಅಮೃತ ಡಿ. ದೊಡಮನಿ

(15 Jun 1965)