About the Author

ಕವಿ ಆನಂದ ಝಂಜರವಾಡ ಅವರು ಬಾಗಲಕೋಟೆಯಲ್ಲಿ 1952 ಜೂನ್ 25ರಂದು ಜನಿಸಿದರು. ಕಾವ್ಯ ರಚನೆ ಹಾಗೂ ವಿಮರ್ಶೆ ಇವರ ಆಸಕ್ತಿ ಕ್ಷೇತ್ರ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಪದಗಳ ಪರಿಧಿಯಲ್ಲಿ, ಬನನೋತ್ಸವ, ಎಲ್ಲಿದ್ದಾನೆ ಮನುಷ್ಯ?  ಮುಂತಾದವು ಇವರ ಪ್ರಮುಖ ಕವನ ಸಂಕಲನಗಳು. ಇವರ ಬನನೋತ್ಸವ ಕಾವ್ಯಕ್ಕೆ ಕವಿ ಮುದ್ದಣ ಸ್ಮಾರಕ ಬಹುಮಾನ, ವರ್ಧಮಾನ ಪ್ರಶಸ್ತಿ ಬಂದಿವೆ. 'ಎಲ್ಲಿದ್ದಾನೆ ಮನುಷ್ಯ' ಕೃತಿಗೆ ದಿನಕರ ದೇಸಾಯಿ ಸ್ಮಾರಕ ಬಹುಮಾನ ಲಭಿಸಿದೆ.

ಆನಂದ ಝಂಜರವಾಡ

(25 Jun 1952)