About the Author

ಲೇಖಕ ಅಪ್ಪಾಸಾಹೇಬ ಕುಲಕರ್ಣಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಚಡಚಣದವರು. ಹುಟ್ಟೂರು ಹಾಗೂ ಸಾಲೋಟಗಿಯಲ್ಲಿ ಪ್ರಾಥಮಿಕ ಶಿಕ್ಷಣ, ಇಂಡಿಯಲ್ಲಿ ಪಿಯುಸಿ, ಕಲಬುರಗಿ ಜಿಲ್ಲೆಯ ಅಫಜಲಪುರದಲ್ಲಿ ಟಿಸಿಎಚ್, ಕರ್ನಾಟಕ ವಿ.ವಿಯಿಂದ ಬಿ.ಎ, ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯಿಂದ ಬಿ.ಇಡಿ, ಶಿವಮೊಗ್ಗದ ಕುವೆಂಪು ವಿ.ವಿ.ಯಿಂದ ಎಂ.ಎ ಪದವೀಧರರು. ಸದ್ಯ ಪ್ರೌಢಶಾಲೆ ಶಿಕ್ಷಕರಾಗಿದ್ದಾರೆ.

ಕೃತಿಗಳು: ಪಯಣ (ಕವನ ಸಂಕಲನ), ದರ್ಶನ (ಸಂಪಾದಿತ ಕೃತಿ), ದಾಸ ದರ್ಪಣ (ಸಂಪಾದಿತ ), ಕನ್ನಡ ಜ್ಞಾನಪೀಠ ಪುರಸ್ಕೃತರು (ಸಂಪಾದಿತ), ಇವಲ್ಲದೇ, ಅಧ್ಯಾತ್ಮವೇ ಪರಿಹಾರ, ಶಿಕ಼್ಣದ ಸಾರ್ವತ್ರೀಕರಣ: ಅಂದು, ಇಂದು ಹೀಗೆ ವಿವಿಧ ವಿಷಯಗಳ ಮೇಲೆ ಹತ್ತು ಹಲವು ಲೇಖನಗಳನ್ನು ಬರೆದಿದ್ದಾರೆ. ಇವರು ಬರೆದ ಕವನಗಳೂ ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 

ಪ್ರಶಸ್ತಿ-ಪುರಸ್ಕಾರಗಳು: ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನದಿಂದ ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಕಲಬುರಗಿಯಿಂದ ಜಿಲ್ಲಾ ಅತ್ತುತ್ತಮ ಶಿಕ್ಷಕ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನಿಂದ ಕಲಬುರಗಿ ಜಿಲ್ಲಾ ಶಿಕ್ಷಕ ಪ್ರಶಸ್ತಿ ಲಭಿಸಿವೆ. ವಿವಿಧ ಸಮಾಜ ಸಂಘಟನೆಗಳೊಂದಿಗೆ ಸಮಾಜ ಸೇವೆಯಲ್ಲಿ ಸಕ್ರಿಯರಾಗಿದ್ದಾರೆ. ವಿಚಾರ ಸಂಕಿರಣ.,ಶಿಬಿರ, ಕಮ್ಮಟ, ಸಮ್ಮೇಳನ ಹೀಗೆ ವಿವಿಧ ವೇದಿಕೆಗಳಲ್ಲಿ ಪಾಲ್ಗೊಂಡು ತಮ್ಮ ವಿಚಾರಗಳನ್ನು-ಉಪನ್ಯಾಸಗಳನ್ನು ಮಂಡಿಸಿದ್ದಾರೆ. 

 

ಅಪ್ಪಾಸಾಹೇಬ ಕುಲಕರ್ಣಿ

(04 Oct 1969)

Books by Author