ಪಯಣ

Author : ವಿಜಯಭಾರತೀ ಎ.ಎಸ್

Pages 88

₹ 100.00
Year of Publication: 2018
Published by: ಎಚ್ ಎಸ್ ಆರ್ ಎ ಪ್ರಕಾಶನ

Synopsys

ಲೇಖಕಿ ವಿಜಯಭಾರತಿ ಎ ಎಸ್ ಅವರ ಕಥಾ ಸಂಕಲನ ‘ಪಯಣ’. ‘ಪಯಣ' ಕಥಾ ಸಂಕಲನದಲ್ಲಿ ಹನ್ನೊಂದು ಕಿರುಗಥೆಗಳಿವೆ.ಹೆಣ್ಣಿನ ಮನೋಲೋಕದ ಚಿತ್ರಣವೇ ಇಲ್ಲಿ ಪ್ರಧಾನ. ಹೆಣ್ಣಿನ ದುಗುಡ-ದುಮ್ಮಾನ, ತವಕ- ತಲ್ಲಣ, ಒಳತೋಟಿಗಳು,ಗಂಡಿನ ಕ್ರೌರ್ಯ, ಸ್ತ್ರೀ ಸ್ವಾತಂತ್ರ್ಯ, ಪ್ರತಿಭಟನೆ, ವರದಕ್ಷಿಣೆಯ ಸಮಸ್ಯೆ, ಗಂಡ ಬಿಟ್ಟವಳ ಅಸಹಾಯಕತೆ, ಸವತಿಮತ್ಸರ,ಸತೀ ಧರ್ಮ, ವಿಧವಾ ವಿವಾಹಗಳ ಕುರಿತಾದ ಕಥೆಗಳನ್ನು ಈ ಸಂಕಲನದ ಮೂಲಕ ಲೋಕಾರ್ಪಣೆ ಮಾಡಿದ್ದಾರೆ ಲೇಖಕಿ. ಇಲ್ಲಿನ ಕಥೆಗಳು ನವೋದಯ, ನವ್ಯ, ಬಂಡಾಯ, ಪ್ರಗತಿಶೀಲ ಹೀಗೆ ಯಾವ ಹಣೆಪಟ್ಟಿಯನ್ನೂ ಕಟ್ಟುಕೊಂಡಿಲ್ಲ. ಬದುಕಿನ ಒಂದು ಪ್ರಮುಖ ನಿರ್ಧಾರ, ಘಟನೆ , ವೃತ್ತಾಂತ, ಪ್ರಕರಣಗಳಿಗೆ ಭಾಷೆಯ ಸುಂದರ ವಸ್ತ್ರ ತೊಡಿಸಿ, ಕಥಾರೂಪು ಕೊಟ್ಟು ಗಮನ ಸೆಳೆಯುತ್ತಾರೆ. ತಲ್ಲಣ, ಅಪರಿಚಿತ ಹಾಗೂ ಪಟ್ಟಮಹಿಷಿ ಈ ಸಂಕಲನದ ವಿಶಿಷ್ಟ ಕಥೆಗಳು.

About the Author

ವಿಜಯಭಾರತೀ ಎ.ಎಸ್

ವಿಜಯಭಾರತೀ ಎ.ಎಸ್ ಅವರು ಗಾಯಕಿ, ಕವಯತ್ರಿ, ಕತೆಗಾರ್ತಿ, ಲೇಖಕಿ. ದೇಶ ಸುತ್ತುವ ಕೋಶ ಓದುವ ಹವ್ಯಾಸವನ್ನು ಪೋಷಿಸುವ ಅಪರಿಮಿತ ಕನ್ನಡ ಪ್ರೇಮಿ. ಬಿಎಸ್ಸಿ ಪದವೀದರರಾದರೂ, ಸಾಹಿತ್ಯದೆಡೆಗಿನ ತುಡಿತ ನಿರಂತರ. ಹಾಗಾಗಿ ಕರ್ನಾಟಕ ಮುಕ್ತ ವಿವಿಯಿಂದ ಕನ್ನಡ ಎಂ ಎ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್‍ಯಾಂಕ್ ಹಾಗೂ ಮೂರು ಚಿನ್ನದ ಪದಕಗಳನ್ನು ಪಡೆದ ಪ್ರತಿಭಾನ್ವಿತೆ. ಭಾರತೀಯ ಅಂಚೆ ಕಛೇರಿಯಲ್ಲಿ ಇಪ್ಪತ್ತೈದು ವರ್ಷಗಳ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ತೆಗೆದುಕೊಂಡ ನಂತರ ಸಣ್ಣಕಥೆ, ಕಿರು ಕಾದಂಬರಿ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವನಿತಾ, ಮಂಗಳಾ, ರಾಗಸಂಗಮ ಇತ್ಯಾದಿ ಪತ್ರಿಕೆಗಳಲ್ಲಿ ಇವರ ಕಥೆ ...

READ MORE

Related Books