About the Author

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮುಟಾದವರಾದ ಕವಿ ಅರವಿಂದ ನಾಡಕರ್ಣಿ ಅವರು ಜನಿಸಿದ್ದು 1931 ಜನವರಿ 1 ರಂದು ಜನಿಸಿದರು. ತಾಯಿ ಉಮಾಬಾಯಿ, ತಂದೆ ಶಂಕರ ದತ್ತಾತ್ರೇಯ ನಾಟಕರ್ಣಿ. ಬಂಕಿಕೊಡ್ಲುವಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮುಂಬೈನ ರೂಯಿಯಾ ಕಾಲೇಜಿನಿಂದ ಬಿಎಸ್‌ಸ್ಸಿ ಪದವಿ ಹಾಗೂ ಕೊಲ್ಲಾಪುರದ ಶಹಾಜೀ ಕಾನೂನು ಕಾಲೇಜಿನಿಂದ ಎಲ್‌.ಎಲ್.ಬಿ ಪದವಿ ಪಡೆದರು. 

ಮುಂಬೈನ ಇನ್‌ಕಂಟ್ಯಾಕ್ಸ್‌ ಕಚೇರಿಯಲ್ಲಿ ಗುಮಾಸ್ತರಾಗಿ ವೃತ್ತಿ ಆರಂಭಿಸಿ, ಸಲಹೆಗಾರರಾಗಿ ಕೆಲಸ ಮಾಡಿ ನಿವೃತ್ತರಾದರು. ಕೆಲಕಾಲ ಸೃಜನವೇದಿ ಪತ್ರಿಕೆಯನ್ನು ನಡೆಸಿದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಮುಂತಾದ ಗೌರವಗಳಿಗೆ ಭಾಜನರಾಗಿದ್ದಾರೆ. 

ಮಡಿಕೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ ಹಾಗೂ ಉತ್ತರ ಕನ್ನಡ ಜಿಲ್ಲೆ ಭಟ್ಕಳದಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಇವರ ಪ್ರಮುಖ ಕೃತಿಗಳೆಂದರೆ ಕಾವ್ಯಾರ್ಪಣ, ಜರಾಸಂಧ, ನಗರಾಯಣ, ನಾ ಭಾರತೀಕುಮಾರ, ಆತ್ಮಭಾರತ, ಮಾಯಾವಿ, ಅಹತ ಮುಂತಾದವು. 

ಅರವಿಂದ ನಾಡಕರ್ಣಿ

(01 Jan 1931-19 May 2008)