ಕಾವ್ಯಾರ್ಪಣ

Author : ಅರವಿಂದ ನಾಡಕರ್ಣಿ

Pages 70

₹ 5.00




Year of Publication: 1962
Published by: ಜನತಾ ಪ್ರಕಾಶನ
Address: ಕೆನರ ವೆಲ್‌ಫರ್‌ ಟ್ರಸ್ಟ್‌, ಅಂಕೋಲಾ (ಉ.ಕ.)

Synopsys

ಹಿರಿಯ ಕವಿ ಅರವಿಂದ ನಾಡಕರ್ಣಿ ಅವರ ಮೊದಲ ಕವನ ಸಂಕಲನ ’ಕಾವ್ಯಾರ್ಪಣ’. ಈ ಸಂಕಲನದಲ್ಲಿ 26ಕವಿತೆಗಳಿವೆ. ಅರ್ಪಣ ಮೊದಲ ಕವಿತೆಯಾದರೆ ’ರಾತ್ರಿಯ ಮುಖದ್ವಯಗಳು’ ಕೊನೆಯ ಕವಿತೆ. ಈ ಸಂಕಲನಕ್ಕೆ ವಿ.ಕೃ. ಗೋಕಾಕ ಅವರ ಮುನ್ನುಡಿಯಿದೆ. 

ಮುನ್ನುಡಿಯಲ್ಲಿ ಗೋಕಾಕರು ಈ ಸಂಕಲನದ ಕವಿತೆಗಳನ್ನು ಕುರಿತು ’ಅರವಿಂದ ನಾಡಕರ್ಣಿಯವರ ಕೃತಿಗಳಲ್ಲಿ ಒಂದು ನೈಸರ್ಗಿಕ ಕಾವ್ಯಗುಣ ಅಂದವಾಗಿ ರೂಪುಗೊಳ್ಳುತ್ತಲಿದೆ. ಉತ್ತರ ಕನ್ನಡದ ನಿಸರ್‍ಗ - ಶ್ರೀಯನ್ನು ಗೀತಿಸುವ ಕವಿತಗಳು ಅವರು ಬರೆದಷ್ಟೂ ನಮಗೆ ಬೇಕು. ಅಲ್ಲಲ್ಲಿ ಪ್ರಾಸಪ್ರಿಯತೆ ಹಾಗೂ ಗದ್ಯದ ತಾಳಲಯಗಳು ಅವರ ನವ್ಯ ಕವಿತೆಗಳ ಕಟ್ಟನ್ನು ಸಡಿಸಲಾಗುತ್ತಿವೆ. ಆದರೆ ಸಂಯಮ- ಔಚಿತ್ಯಗಳನ್ನು ಯಾರು ಒಡನೇ ಸಾಧಿಸಬಲ್ಲರು ? ಕ್ರಮೇಣ ರೂಪುಗೊಳ್ಳುತ್ತಿರುವ ಈ ಕಾವ್ಯಾಕೃತಿಯನ್ನೂ ವ್ಯಕ್ತಿತ್ವ ವಿಶೇಷವನ್ನೂ ನಾನು ಸಂತೋಷ ದಿಂದ ಸ್ವಾಗತಿಸುತ್ತೇನೆ’ ಎಂದಿದ್ದಾರೆ.

About the Author

ಅರವಿಂದ ನಾಡಕರ್ಣಿ
(01 January 1931 - 19 May 2008)

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮುಟಾದವರಾದ ಕವಿ ಅರವಿಂದ ನಾಡಕರ್ಣಿ ಅವರು ಜನಿಸಿದ್ದು 1931 ಜನವರಿ 1 ರಂದು ಜನಿಸಿದರು. ತಾಯಿ ಉಮಾಬಾಯಿ, ತಂದೆ ಶಂಕರ ದತ್ತಾತ್ರೇಯ ನಾಟಕರ್ಣಿ. ಬಂಕಿಕೊಡ್ಲುವಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಮುಂಬೈನ ರೂಯಿಯಾ ಕಾಲೇಜಿನಿಂದ ಬಿಎಸ್‌ಸ್ಸಿ ಪದವಿ ಹಾಗೂ ಕೊಲ್ಲಾಪುರದ ಶಹಾಜೀ ಕಾನೂನು ಕಾಲೇಜಿನಿಂದ ಎಲ್‌.ಎಲ್.ಬಿ ಪದವಿ ಪಡೆದರು.  ಮುಂಬೈನ ಇನ್‌ಕಂಟ್ಯಾಕ್ಸ್‌ ಕಚೇರಿಯಲ್ಲಿ ಗುಮಾಸ್ತರಾಗಿ ವೃತ್ತಿ ಆರಂಭಿಸಿ, ಸಲಹೆಗಾರರಾಗಿ ಕೆಲಸ ಮಾಡಿ ನಿವೃತ್ತರಾದರು. ಕೆಲಕಾಲ ಸೃಜನವೇದಿ ಪತ್ರಿಕೆಯನ್ನು ನಡೆಸಿದ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ ಮುಂತಾದ ಗೌರವಗಳಿಗೆ ಭಾಜನರಾಗಿದ್ದಾರೆ.  ಮಡಿಕೇರಿಯಲ್ಲಿ ...

READ MORE

Related Books