About the Author

ಅರುಂಧತಿ ಸವದತ್ತಿ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ, ಮುಂಬಯಿ ಯೂನಿವರ್ಸಿಟಿ, ನ್ಯಾನ್‌ಯಾಂಗ್ ಟೆಕ್ನಲಜಿ ಯೂನಿವರ್ಸಿಟ ಸಿಂಗಾಪುರ ಮತ್ತು ಅಮೇರಿಕಾದ ಇಂಡಿಯಾನಾ ಯೂನಿವರ್ಸಿಟಿಗಳಲ್ಲಿ ಉಚ್ಚ ಶಿಕ್ಷಣ ಪದವಿ ಪಡೆದರು. ಮುಂಬಯಿಯ ಝೇವಿಯರ್ ಇನ್‌ಸ್ಟಿಟ್ಯೂಟ್ ಆಫ್ ಎಜ್ಯುಕೇಶನ್‌ನಲ್ಲಿ 25 ವರ್ಷಕ್ಕೂ ಹೆಚ್ಚಿನ ಅಧ್ಯಾಪನ ವೃತ್ತಿಯಲ್ಲಿ ಸೇವೆಗೈದಿದ್ದಾರೆ. ನಿವೃತ್ತಿಯ ನಂತರ ಧಾರವಾಡದಲ್ಲಿ ಎನ್. ಪಿ. ಭಟ್‌ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ಎರಡು ವರ್ಷ 'ಅವನಿ' ಪತ್ರಿಕೆಯ ಸಂಪಾದಕತ್ವ ಮತ್ತು ಇದೀಗ ಅವರೇ ಕಾರಣಕರ್ತರಾಗಿ ಬರೆಯಿಸಿದ ಈ ಅನುವಾದಿತ ಪುಸ್ತಕ, ಅರಮನೆ ಸವದತ್ತಿ ಅವರ ಇನ್ನೊಂದು ಅನುವಾದಿತ ಕೃತಿ “ದುಂಬಿಗಳ ನರ್ತನ (ಮೂಲ : ಕಾರ್ಲ್ ಫ್ರಿಶ್ ಅವರ Dancing Bees) ಕೂಡ ಪ್ರಕಟವಾಗಿದೆ.

ಕೃತಿಗಳು : ದುಂಬಿಗಳ ನರ್ತನ

ಅರುಂಧತಿ ಸವದತ್ತಿ