About the Author

ಅಶ್ವತ್ಥಾಚಾರಿ ಕೆ.ಪಿ. (ಕಾವ್ಯನಾಮ: ಅಶ್ವತ್ಥ ಕಲ್ಲೇದೇವರಹಳ್ಳಿ)  ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಗಟಿ ಹೋಬಳಿಯ (ಜನನ: 15-01-1971) ಕಲ್ಲೇದೇವರಹಳ್ಳಿ ಗ್ರಾಮದವರು. ತಂದೆ ಪುಟ್ಟಾಚಾರ್, ತಾಯಿ ಜಯಮ್ಮ. ಭದ್ರಾವತಿಯ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಮೆಟಲರ್ಜಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪದವೀಧರರು. ಶಿವಮೊಗ್ಗದ ಕುವೆಂಪು ವಿ.ವಿ.ಯಿಂದ (ದೂರ ಶಿಕ್ಷಣ) ಕನ್ನಡದಲ್ಲಿ ಎಂ.ಎ. ಪದವೀಧರರು. ಬೆಂಗಳೂರಿನ ಆಕ್ಸ್ ಫರ್ಡ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತರೆ ಭಾಷಿಕರಿಗೆ ಕನ್ನಡದ ತರಬೇತಿ ನೀಡುವುದು ಇವರ ಹವ್ಯಾಸ. ಬೆಂಗಳೂರು ಜಿಲ್ಲೆಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು. .

ಕೃತಿಗಳು: ಜೀವನದಿಯ ತೆಪ್ಪದಲ್ಲಿ, ಯುದ್ಧ ಮತ್ತು ಪ್ರೀತಿ (ಕವನ ಸಂಕಲನಗಳು), ಅಸ್ತಿತ್ವ (ಕಥಾ ಸಂಕಲನ), ನಾಡಿನ ವಿವಿಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಗಳಳ್ಲಿ ಇವರ ಕಥೆ-ಕವನ-ಲೇಖನ-ಅಂಕಣಗಳು ಪ್ರಕಟವಾಗಿವೆ. ಕಥಾಸಮಯ, ಮಲೆನಾಡಿನ ಪುಷ್ಪಗಳು ಹಾಗೂ .ಪ್ರತಿಧ್ವನಿ (ನೆನಪಿನ ಸಂಚಿಕೆಗಳು), ಕನ್ನಡ ಸಾಹಿತ್ಯ ಅಕಾಡೆಮಿಯ ಯುವ ಕಥಾ ಸಂಕಲನದಲ್ಲಿ ಇವರ ‘ಅನಾವರಣ’ ಕಥೆ ಪ್ರಕಟವಾಗಿದೆ. ಮದುಮಿತ ಕಿರುಚಿತ್ರ ಹಾಗೂ ನನಸು-ಸಿನಿಮಾ ಸೇರಿದಂತೆ ಮರ್ಚೆಂಟ್ ಆಪ್ ವೆನೀಸ್ (ಶೇಕ್ಸ್ ಪಿಯರ್), ತಾಳಿಕಟ್ಟಕ್ತಯಾರ್( ಟಿ ಪಿ ಕೈಲಾಸಂ ) ಮತ್ತು ಇತರೆ ಸಾಮಾಜಿಕ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ಅಕ್ಸ ಪ್ರಸ್ತುತಿ ಯೂಟೂಬ್ ಚಾನಲ್ ನಡೆಸುತ್ತಿದ್ದಾರೆ.ಗ್ರಾಮೀಣ ಹಿನ್ನೆಲೆಯ ಕಥಾ ವಸ್ತುವನ್ನು ಒಳಗೊಂಡ ‘ಬಳಪಿನಗುತ್ತಿ’ ಹೆಸರಿನ ಕಿರುಚಿತ್ರವನ್ನು ಬರೆದು ನಿರ್ದೇಶಿಸಿದ್ದಾರೆ. 

ಇವರಿಗೆ ಗ್ರಾಮೀಣ ಪ್ರತಿಭೆ, ಯುವಕಾವ್ಯ ಪ್ರಶಸ್ತಿ, ಬೆಂಗಳೂರು ನಗರ ಜಿಲ್ಲಾ ಕಸಾಪ ವತಿಯಿಂದ ಆದರ್ಶ ಕನ್ನಡಿಗ. ಪ್ರಶಸ್ತಿ ಲಭಿಸಿವೆ.
 

 

ಅಶ್ವತ್ಥ ಕಲ್ಲೇದೇವರಹಳ್ಳಿ