ಯುದ್ಧ ಮತ್ತು ಪ್ರೀತಿ

Author : ಅಶ್ವತ್ಥ ಕಲ್ಲೇದೇವರಹಳ್ಳಿ

Pages 52

₹ 100.00




Year of Publication: 2018
Published by: ಅಶ್ವತ್ಥ ಪುಸ್ತಕ ಮನೆ
Address: ಕಲ್ಲೇದೇವರಹಳ್ಳಿ, ಕಡೂರು ತಾಲೂಕು, ಚಿಕ್ಕಮಗಳೂರು ಜಿಲ್ಲೆ-577182
Phone: 9741919365

Synopsys

ಯುದ್ಧ ಮತ್ತು ಪ್ರೀತಿ-ಕವಿ ಅಶ್ವತ್ಥ ಕಲ್ಲೇದೇವರಹಳ್ಳಿ ಅವರ ಕವಿತೆಗಳ ಸಂಕಲನ. ಇಲ್ಲಿ ಒಟ್ಟು 40 ಕವನಗಳು ಸಂಕಲನಗೊಂಡಿವೆ. ಯುದ್ಧ ಮತ್ತು ಪ್ರೀತಿ ಎಂಬ ಎರಡು ಪ್ರತ್ಯೇಕ ಸನ್ನಿವೇಶಗಳಿದ್ದರೂ ಅಲ್ಲಿ ಒಂದೇ ಒಂದು ನಿಯಮದ  ಅನಿವಾರ್ಯತೆ ಇರುತ್ತದೆ; ಅದು ‘ಏನೇ ಮಾಡು ಅದು ಸರಿ’ ಎನ್ನುವುದು. ಏಕೆಂದರೆ, ಈ ಎರಡೂ ಸನ್ನಿವೇಶದಲ್ಲಿ ವ್ಯಕ್ತಿಯ ಅಸ್ತಿತ್ವದ ಅಳಿವು-ಉಳಿವಿನ ಪ್ರಶ್ನೆ ಅಡಗಿರುತ್ತದೆ. ಕಾವ್ಯವಸ್ತು, ನಿರೂಪಣಾ ಶೈಲಿ, ಸಾಮಾಜಿಕ ಹೊಣೆಗಾರಿಕೆಯ ಎಚ್ಚರ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕವಿತೆಗಳು ಓದುಗರ ಗಮನ ಸೆಳೆಯುತ್ತವೆ. 

ಪತ್ರಕರ್ತ ಹಾಗೂ ಚಿಂತಕ ಚೀ. ಜ. ರಾಜೀವ ಕೃತಿಗೆ ಬೆನ್ನುಡಿ ಬರೆದು ‘ಮನುಷ್ಯ ತನ್ನದೇ ಮಿತಿಯಲ್ಲಿ ಆದರ್ಶವಾದಿಯಾಗಿ ಬದುಕಲು ಸಾಧ್ಯ. ಇಂತಹ ಆದರ್ಶವನ್ನು ಅಶ್ವತ್ಥಣ್ಣ ಬದುಕಿದ್ದಾರೆ. ಇದು ಅವರ ಯುದ್ಧ ಮತ್ತು ಪ್ರೀತಿಯಲ್ಲಿ ಢಾಳಾಗಿ ಕಾಣುತ್ತಿದೆ. ಪ್ರೀತಿ ಅವರ ಆದರ್ಶವಾದರೆ, ಯುದ್ಧ ಎಂಬುದು ಅವರ ಬದುಕಿನ ಸಮಸ್ಯೆ-ಸವಾಲು-ಸಮೃದ್ಧಿಯೇ ಆಗಿದೆ’ ಎಂದು ಇಲ್ಲಿಯ ಕವಿ-ಕವಿತೆಗಳ ಸ್ವರೂಪವನ್ನು ಕಾಣಿಸಿದ್ದಾರೆ. 

ಕವಿ ಅಶ್ವತ್ಥ ಕಲ್ಲೇದೆವರಹಳ್ಳಿ ತಮ್ಮ ಈ ಕವಿತೆಗಳು ರೂಪು ಪಡೆದ ಪರಿಯನ್ನು ಅವಲೋಕಿಸುತ್ತಾ ‘ಈ ಬದುಕಿನ ಹಠಮಾರಿತನ ಸುಖಾ ಸುಮ್ಮನೇ ನನ್ನನ್ನು ಕೂರುವಂತೆ ಮಾಡುವುದಿಲ್ಲ. ನನ್ನೊಳಗಿನ ಅಂತಃಸತ್ವಕ್ಕೆ ಕಾವು ಕೊಟ್ಟು ಮತ್ತೆ ಮತ್ತೆ ನನ್ನನ್ನು ಗಟ್ಟಿಗೊಳಿಸುತ್ತಲೇ ಇದೆ. ತಾಂತ್ರಿಕ ಶಿಕ್ಷಣ ಪಡೆದ ನಾನು ಸಾಹಿತ್ಯದ ಒಳಗಿನ ಹೂರಣವನ್ನು ಉಂಡು ಅರಗಿಸಿಕೊಳ್ಳುವ ಶಕ್ತಿಯಾಗಲಿ ಅಥವಾ ಒಳತೋಟಿಗೆ ಪುಟಿಯುವ ಗಮ್ಯ ಹೆಜ್ಜೆಗಳಾಗಲಿ ಅಸಾಧ್ಯ ಎನ್ನುವ ಅನುಮಾನ ನನ್ನನ್ನು ಕಾಡಿದ್ದುಂಟು. ಆದರೆ ಅವೆಲ್ಲವನ್ನೂ ಮೀರಿದ ಬೆಳವಣಿಗೆ ಸಾಧ್ಯವಾಗಿದೆ ಅನ್ನುವ ಮಾತುಗಳು ಸಾಹಿತ್ಯಾಸಕ್ತರ ಹಿಂಡಿನಿಂದ ಕಿವಿಗೆ ಬೀಳತೊಡಗಿದಾಗ, ಧೋರಣೆಯನ್ನು ಬದಲಿಸಿಕೊಂಡಿದ್ದರ ಮತ್ತೊಂದು ಭಾಗವೇ ಈ ಯುದ್ದ ಮತ್ತು ಪ್ರೀತಿ’ ಎಂದು ಒಂದರ್ಥದಲ್ಲಿ ಕವನಗಳ ಸ್ವರೂಪವನ್ನು ತೋರಿದ್ದಾರೆ. 

 

About the Author

ಅಶ್ವತ್ಥ ಕಲ್ಲೇದೇವರಹಳ್ಳಿ

ಅಶ್ವತ್ಥಾಚಾರಿ ಕೆ.ಪಿ. (ಕಾವ್ಯನಾಮ: ಅಶ್ವತ್ಥ ಕಲ್ಲೇದೇವರಹಳ್ಳಿ)  ಅವರು ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಹಗಟಿ ಹೋಬಳಿಯ (ಜನನ: 15-01-1971) ಕಲ್ಲೇದೇವರಹಳ್ಳಿ ಗ್ರಾಮದವರು. ತಂದೆ ಪುಟ್ಟಾಚಾರ್, ತಾಯಿ ಜಯಮ್ಮ. ಭದ್ರಾವತಿಯ ಸರ್ಕಾರಿ ಪಾಲಿಟೆಕ್ನಿಕ್ ನಲ್ಲಿ ಮೆಟಲರ್ಜಿಕಲ್ ಇಂಜಿನಿಯರಿಂಗ್ ನಲ್ಲಿ ಡಿಪ್ಲೊಮಾ ಪದವೀಧರರು. ಶಿವಮೊಗ್ಗದ ಕುವೆಂಪು ವಿ.ವಿ.ಯಿಂದ (ದೂರ ಶಿಕ್ಷಣ) ಕನ್ನಡದಲ್ಲಿ ಎಂ.ಎ. ಪದವೀಧರರು. ಬೆಂಗಳೂರಿನ ಆಕ್ಸ್ ಫರ್ಡ್ ಇಂಜಿನಿಯರಿಂಗ್ ಕಾಲೇಜಿನ ಮೆಕ್ಯಾನಿಕಲ್ ವಿಭಾಗದಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದಾರೆ. ಇತರೆ ಭಾಷಿಕರಿಗೆ ಕನ್ನಡದ ತರಬೇತಿ ನೀಡುವುದು ಇವರ ಹವ್ಯಾಸ. ಬೆಂಗಳೂರು ಜಿಲ್ಲೆಯ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ...

READ MORE

Related Books