About the Author

ಲೇಖಕ ಬಿ.ಎಚ್. ನಿರಗುಡಿ ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕವಲಗಾ ಗ್ರಾಮದವರು. ಗುಲಬರ್ಗಾ ವಿವಿಯಿಂದ ಎಂ.ಎ, ಎಂ.ಇಡಿ ಪದವೀಧರರು. ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ನಗರದ ಖಾಸಗಿ ಪ.ಪೂ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ಸಾಹಿತ್ಯ ಸಾರಥಿ’ ಮಾಸ ಪತ್ರಿಕೆಯ ಸಂಪಾದಕರು. ವಿವಿಧ ಕ್ಷೇತ್ರದ ಸಾಧಕರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಗೌರವಿಸುತ್ತಿದ್ದಾರೆ. ಕಲಬುರಗಿ ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ.

ಕೃತಿಗಳು: ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಕನ್ನಡ ಭಾಷೆ ಹಾಗೂ ವ್ಯಾಕರಣ, ಕನ್ನಡ ಸಾಹಿತ್ಯ ದರ್ಪಣ, ಮಾಧ್ಯಮ ಲೋಕ, ರಾಷ್ಟ್ರದ ಪ್ರಖ್ಯಾತ ಮಹನೀಯರು, ಕಾವ್ಯ ಸಂಭ್ರಮ, ಆದರ್ಶ ಶಿಕ್ಷಕ ಹೇಗಿರಬೇಕು?, ಸಾಮಾನ್ಯ ಜ್ಞಾನ ಇತ್ಯಾದಿ

ಪ್ರಶಸ್ತಿ-ಪುರಸ್ಕಾರಗಳು: ಜಿಲ್ಲಾ ಯುವ ಪ್ರಶಸ್ತಿ, ಚುಟುಕು ಶ್ರೀ, ಉತ್ತಮ ಸಂಘಟಕ ಶಿಕ್ಷಕ, ಮುಂಡರಗಿ ಭೀಮರಾಯ ರಾಜ್ಯ ಪ್ರಶಸ್ತಿ, ಗುಲಬರ್ಗಾ ವಿ.ವಿ. ರಾಜ್ಯೋತ್ಸವ ಪ್ರಶಸ್ತಿ, ಅಕ್ಷರ ಲೋಕದ ನಕ್ಷತ್ರ ಪ್ರಶಸ್ತಿ, ಸರ್ವಜ್ಞ ಶ್ರೀ ಪ್ರಶಸ್ತಿ, ಕೊಡಗಿನಲ್ಲಿ ನಡೆದ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಗೌರವ ಸನ್ಮಾನ, ಸುವರ್ಣ ಸಿರಿ ಪ್ರಶಸ್ತಿ ಸಂದಿವೆ.

ಬಿ.ಎಚ್. ನಿರಗುಡಿ