ಹಾಸ್ಯ ಲಾಸ್ಯ

Author : ಬಿ.ಎಚ್. ನಿರಗುಡಿ

Pages 87

₹ 20.00




Year of Publication: 2005
Published by: ರೇಣುಕಾ ಪ್ರಕಾಶನ
Address: # 1-1495/202, ಗೋದೂತಾಯಿನಗರ, ಕಲಬುರಗಿ-585002
Phone: 9886233064

Synopsys

ಲೇಖಕ ಬಿ.ಎಚ್. ನಿರಗುಡಿ ಅವರ ನಗೆಹನಿಗಳ ಸಂಕಲನ- ಹಾಸ್ಯ ಲಾಸ್ಯ 1999 ರಲ್ಲಿ ಈ ಕೃತಿಯು ಮೊದಲ ಮುದ್ರಣ ಕಂಡಿತ್ತು. ಸುಮಾರು 100 ಹಾಸ್ಯಭರಿತ ನ್ಯಾನೋ ಕಥೆಗಳಿವೆ. ಗಾತ್ರದಲ್ಲಿ ಕಿರಿದಾಗಿದ್ದರೂ ಅವು ನೀಡುವ ಸಂದೇಶಗಳು ತುಂಬಾ ಪರಿಣಾಮಕಾರಿಯಾಗಿವೆ. ಹಿರಿಯರು ಮಾತ್ರವಲ್ಲ; ಮಕ್ಕಳನ್ನು ಕೇಂದ್ರವಾಗಿಸಿಕೊಂಡು ಇಲ್ಲಿಯ ಕಥೆಗಳನ್ನು ರಚಿಸಿದ್ದು, ನ್ಯಾನೋಕಥೆಗಳು ವೈದ್ಯರು, ಶಿಕ್ಷಕರು, ಪ್ರಾಣಿಗಳು, ಮಹಿಳೆಯರು ಹೀಗೆ ವಸ್ತುಗಳನ್ನು ಹೊಂದಿವೆ.

About the Author

ಬಿ.ಎಚ್. ನಿರಗುಡಿ

ಲೇಖಕ ಬಿ.ಎಚ್. ನಿರಗುಡಿ ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕವಲಗಾ ಗ್ರಾಮದವರು. ಗುಲಬರ್ಗಾ ವಿವಿಯಿಂದ ಎಂ.ಎ, ಎಂ.ಇಡಿ ಪದವೀಧರರು. ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಹಾಗೂ ಕಲಬುರಗಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ನಗರದ ಖಾಸಗಿ ಪ.ಪೂ. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದಾರೆ. ‘ಸಾಹಿತ್ಯ ಸಾರಥಿ’ ಮಾಸ ಪತ್ರಿಕೆಯ ಸಂಪಾದಕರು. ವಿವಿಧ ಕ್ಷೇತ್ರದ ಸಾಧಕರಿಗೆ ಸಾಹಿತ್ಯ ಸಾರಥಿ ಪ್ರಶಸ್ತಿ ಗೌರವಿಸುತ್ತಿದ್ದಾರೆ. ಕಲಬುರಗಿ ಆಕಾಶವಾಣಿಯಲ್ಲಿ ಇವರ ಚಿಂತನೆಗಳು ಪ್ರಸಾರವಾಗಿವೆ. ಕೃತಿಗಳು: ಮಹಾನ್ ಮುತ್ಸದ್ಧಿ ಅಟಲ್ ಬಿಹಾರಿ ವಾಜಪೇಯಿ, ಅಬ್ದುಲ್ ಕಲಾಂ, ಕನ್ನಡ ಭಾಷೆ ಹಾಗೂ ...

READ MORE

Related Books