About the Author

ಸ್ವಾತಂತ್ಯ್ರ ಹೋರಾಟಗಾರ, ಕವಿ, ಪತ್ರಕರ್ತ, ರಾಜಕಾರಣಿ ಬಿ.ಎಂ.ಇದಿನಬ್ಬ ಅವರು ಜನಿಸಿದ್ದು 1920 ಸೆಪ್ಟೆಂಬರ್ 19ರಂದು. ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ಬೋಳುಂಬುಡದವರಾದ ಇವರು ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದರು. ಉಳ್ಳಾಲ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 

ಸಾಹಿತ್ಯದಲ್ಲಿ ಆಸಕ್ತಿಯಲ್ಲಿ ಇವರು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎಂಬ ಹೋರಾಟ ಮಾಡಿದವರಲ್ಲಿ ಪ್ರಮುಖರಾದ ಇದಿನಬ್ಬ ಅವರು 2009 ಏಪ್ರಿಲ್ 11 ರಂದು ನಿಧನರಾದರು. 

ಇವರಿಗೆ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಹಲವಾರು ಪುರಸ್ಕಾರಗಳು ದೊರೆತಿವೆ. ಇವರು ಬರೆದ ಪ್ರಮುಖ ಕೃತಿಗಳೆಂದರೆ ಬಾಳಿನ ಚಿತ್ರಗಳು, ಹರಿದ ಕೋಟು (ಸಣ್ಣಕತೆಗಳು), ಹೃದಯಗೀತೆಗಳು (ಕವನ), ಜೇನುಗೂಡು (ಕವನ), ವೀರಗೀತೆಗಳು, ಮತ್ತು ಕಿಡಿಗಳು (ದೇಶಪ್ರೇಮಗೀತೆಗಳು) ಮುಂತಾದವು. 

ಬಿ.ಎಂ. ಇದಿನಬ್ಬ

(19 Sep 1920-04 Nov 2009)