About the Author

ಭಾರತರತ್ನ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರದು ಬಹುಮುಖಿ ಸಾಮರ್ಥದ ಅಸಾಧಾರಣ ವ್ಯಕ್ತಿತ್ವ. ಬಿ.ಆರ್.ಅಂಬೇಡ್ಕರ್. ಅವರು 1891 ಎಪ್ರಿಲ್ 14 ಇಂದಿನ ಮಾಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬಾವಾಡೆ ಗ್ರಾಮದಲ್ಲಿ ಜನಿಸಿದರು.  ಭಾರತದಲ್ಲಿನ ಜಾತಿ ವ್ಯವಸ್ಥೆಯ ಅವಮಾನದಿಂದ ನೊಂದು ಓದಬೇಕು ಎಂಬ ಹಠ ಅವರನ್ನು ಮುಂದೆ ಸಂವಿಧಾನ ಎಂಬ ಬೃಹತ್‌ ಗ್ರಂಥ ರಚಿಸಲು ಪ್ರೇರಣೆಯಾಯಿತು. ಅವರು ‘ಬ್ರಿಟಿಷ್ ಭಾರತದಲ್ಲಿನ ಪ್ರಾಂತೀಯ ಹಣಕಾಸು ಪದ್ಧತಿಯ ವಿಕಾಸ’, ‘ರುಪಾಯಿಯ ಬಿಕ್ಕಟ್ಟು’ ಸಂಶೋಧನಾ ಪ್ರಬಂಧಗಳನ್ನು ಕೈಗೊಂಡಿದ್ದರು. ‘ಭಾರತದಲ್ಲಿ ಜಾತಿಪದ್ಧತಿ’, ‘ಬುದ್ಧ ಮತ್ತು ಅವನ ದಮ್ಮ’, ನನ್ನ ವೈಯಕ್ತಿಕ ತತ್ವಜ್ಞಾನ’, ‘ಪ್ರಜಾಪ್ರಭುತ್ವದ ಯಶಸ್ವಿ ಅಂಶಗಳು’ ಮುಂತಾದ ಪ್ರಮುಖ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ. 

ಕರಡು ಸಮಿತಿಯ ಅಧ್ಯಕ್ಷರಾಗಿದ್ದ ಅವರು ‘ಸಂವಿಧಾನ ಶಿಲ್ಪಿ’ ಎನಿಸಿದರು. ಭಾರತದ ಪರಮೋಚ್ಛ ಪ್ರಶಸ್ತಿಯಾದ ‘ಭಾರತ ಪ್ರಶಸ್ತಿ’, ‘ಮರಣೋತ್ತರ ವಿಶ್ವರತ್ನ ಪ್ರಶಸ್ತಿ’ ಮುಂತಾದ ಪ್ರಶಸ್ತಿಗಳು ಲಭಿಸಿವೆ.  

ಬಿ.ಆರ್‌. ಅಂಬೇಡ್ಕರ್