About the Author

ಲೇಖಕ ಡಾ. ಬಿ.ಆರ್. ಅಣ್ಣಾಸಾಗರ ಅವರು ಮೂಲತಃ  ಯಾದಗಿರಿ ಜಿಲ್ಲೆಯ ಗುರುಮಠಕಲ್ ನಿವಾಸಿ. ಅಲ್ಲಿಯೇ ಪಿಯುಸಿ ವರೆಗೆ ಶಿಕ್ಷಣ ಪೂರೈಸಿದ್ದಾರೆ. ಹೈದ್ರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಎ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಫಿಲ್,  ಆಂಧ್ರಪ್ರದೇಶದ ಕುಪ್ಪಂನಲ್ಲಿಯ ದ್ರಾವಿಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ, ಹಾಗೂ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯನಿಂದ ಬಿ.ಸಿ.ಜೆ; ಪಿ.ಜಿ.ಡಿ.ಇ.ಇ.ಪದವೀಧರರು. ಸದ್ಯ, ಕಲಬುರಗಿ ಜಿಲ್ಲೆಯ ಸೇಡಂ ನಗರದ ಸರ್ಕಾರಿ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದು, ದೂರದರ್ಶನದಲ್ಲೂ ಉಪನ್ಯಾಸಗಳನ್ನು ನೀಡಿದ್ದಾರೆ. ಕಲ್ಬುರ್ಗಿ ಆಕಾಶವಾಣಿ ಕೇಂದ್ರದಿಂದ ಹಲವು ಚಿಂತನ, ಸ್ವ-ರಚಿತ ಕವನ ವಾಚನ, ಸಂದರ್ಶನ ಇತ್ಯಾದಿ ಪ್ರಸಾರವಾಗಿವೆ. ಪತ್ರಿಕೆಗಳಲ್ಲಿ ಕವನ, ಚುಟುಕು, ಲೇಖನ, ಪತ್ರ ಪ್ರಕಟವಾಗಿವೆ.

ಕೃತಿಗಳು: ಹೇಳು ಮಿತ್ರ (ಕವನ ಸಂಕಲನ), ಅಭಿವೃದ್ಧಿಯ ಹೊಸ ಆಯಾಮಗಳು (ಆರ್ಥಿಕ ಲೇಖನಗಳ ಸಂಕಲನ), ಬ್ಯಾಂಕಿಂಗ್ ಉದ್ದಿಮೆ, ಬೆಲೆ ಏರಿಕೆ ಕಾರಣ, ಪರಿಣಾಮ ಮತ್ತು ನಿಯಂತ್ರಣ, ಆಸರೆಯಾದವರು (ಸಂಪಾದಿತ -ಅಪರೂಪದ ಮಹನೀಯರ ಜೀವನ ಚಿತ್ರಣ ಸಂಕಲನ),

ಬಿ.ಆರ್. ಅಣ್ಣಾಸಾಗರ