ಅಭಿವೃದ್ಧಿಯ ಹೊಸ ಆಯಾಮಗಳು

Author : ಬಿ.ಆರ್. ಅಣ್ಣಾಸಾಗರ

Pages 104

₹ 96.00




Year of Publication: 2009
Published by: ಸಂಸ್ಕೃತಿ ಪ್ರಕಾಶನ
Address: ವಾಹಿತಿ ವಿಹಾರ, ಬಸವನಗರ, ಸೇಡಂ-585222, ಜಿಲ್ಲೆ : ಕಲಬುರಗಿ
Phone: 9460465232

Synopsys

ಲೇಖಕ ಡಾ ಬಿ ಆರ್ ಅಣ್ಣಾಸಾಗರ ಅವರ ಕೃತಿ "ಅಭಿವೃದ್ಧಿಯ ಹೊಸ ಆಯಾಮಗಳು".. ಈ ಪುಸ್ತಕವು ಆರ್ಥಿಕ ವಿಷಯ ಸಂಬಂಧಿ ಒಟ್ಟು 20 ಲೇಖನಗಳ ಸಂಗ್ರಹವಾಗಿದೆ. ಈ ಕೃತಿಗೆ ಕಲಬುರಗಿ ಜಿಲ್ಲೆಯ ಶಹಾಬಾದಿನ ಮರಗೋಳ್ ಕಾಲೇಜಿನ ಡಾ ಬಿ ಪಿ ಬುಳ್ಳಾ ಅವರು ಮುನ್ನುಡಿ ಬರೆದಿದ್ದರೆ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ ಇಂದ್ರಕಾಂತ ಎಸ್ ಬೆನ್ನುಡಿ ಬರೆದು ‘ಸಾಮಾನ್ಯರು ವಿಶ್ವ ಜ್ಞಾನ ಪಡೆಯಬೇಕಾದರೆ ದೊಡ್ಡ ದೊಡ್ಡ ಗ್ರಂಥ ಓದಲು ಆಗುವುದಿಲ್ಲ ಆದ್ದರಿಂದ ವಿದ್ವತ್ ಜನರ ಕೃತಿ ಪರಾಮರ್ಶನ ಮಾಡಬೇಕು. ಈ ನಿಟ್ಟಿನಲ್ಲಿ ಈ ಕೃತಿಯು ಉಪಯುಕ್ತ’ ಎಂದು ಪ್ರಶಂಸಿಸಿದ್ದಾರೆ. ನಿಯತಕಾಲಿಕೆಗಳಾದ ಯೋಜನಾ, ವಿಜಯ ಕರ್ನಾಟಕ ಇತ್ಯಾದಿಗಳಲ್ಲಿ ಪ್ರಕಟವಾಗಿವೆ. ಬೇರೆ ಬೇರೆ ಸಮ್ಮೇಳನ, ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳಾಗಿ ಓದಲಾಗಿದೆ ಎಂದು ಲೇಖಕರು ತಿಳಿಸಿದ್ದಾರೆ.

 

 

About the Author

ಬಿ.ಆರ್. ಅಣ್ಣಾಸಾಗರ

ಲೇಖಕ ಡಾ. ಬಿ.ಆರ್. ಅಣ್ಣಾಸಾಗರ ಅವರು ಮೂಲತಃ  ಯಾದಗಿರಿ ಜಿಲ್ಲೆಯ ಗುರುಮಠಕಲ್ ನಿವಾಸಿ. ಅಲ್ಲಿಯೇ ಪಿಯುಸಿ ವರೆಗೆ ಶಿಕ್ಷಣ ಪೂರೈಸಿದ್ದಾರೆ. ಹೈದ್ರಾಬಾದ್ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಎ, ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಫಿಲ್,  ಆಂಧ್ರಪ್ರದೇಶದ ಕುಪ್ಪಂನಲ್ಲಿಯ ದ್ರಾವಿಡ ವಿಶ್ವವಿದ್ಯಾಲಯದಿಂದ ಪಿಎಚ್ ಡಿ, ಹಾಗೂ ಹೈದರಾಬಾದಿನ ಕೇಂದ್ರೀಯ ವಿಶ್ವವಿದ್ಯಾಲಯನಿಂದ ಬಿ.ಸಿ.ಜೆ; ಪಿ.ಜಿ.ಡಿ.ಇ.ಇ.ಪದವೀಧರರು. ಸದ್ಯ, ಕಲಬುರಗಿ ಜಿಲ್ಲೆಯ ಸೇಡಂ ನಗರದ ಸರ್ಕಾರಿ ಪದವಿ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಅರ್ಥಶಾಸ್ತ್ರದ ಪ್ರಾಧ್ಯಾಪಕರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿದ್ದು, ದೂರದರ್ಶನದಲ್ಲೂ ಉಪನ್ಯಾಸಗಳನ್ನು ನೀಡಿದ್ದಾರೆ. ಕಲ್ಬುರ್ಗಿ ಆಕಾಶವಾಣಿ ಕೇಂದ್ರದಿಂದ ಹಲವು ಚಿಂತನ, ...

READ MORE

Related Books