About the Author

ಕತೆಗಾರರಾಗಿರುವ ಬಿ. ಸೀತಾರಾಮ ಭಟ್ ನಿವೃತ್ತ ಇತಿಹಾಸ ಪ್ರಾಧ್ಯಾಪಕರು. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹಲವಾರು ಇತಿಹಾಸ ಪಠ್ಯಪುಸ್ತಕ ರಚಿಸಿರುವ  ಅವರು 'ಅಗೋಚರ' ಮತ್ತು 'ಮನೆಯೊಳಗೊಂದು ಖಾಲಿ ಕೋಣೆ' ಎಂಬ ಎರಡು ಕತಾ ಸಂಕಲನ ಪ್ರಕಟಿಸಿದ್ದಾರೆ.  ತಮ್ಮ ಚಾರಣ ಅನುಭವದ ಲೇಖನಗಳನ್ನು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ.  ಅವರ ಪ್ರವಾಸದ ಅನುಭವ ಬರಹಗಳ ಕೃತಿ ’ಹಬ್ಬಿದಾ ಮಲೆ ಮಧ್ಯದೊಳಗೆ'. 'ಅಮೆಜಾನ್', 'ಪಿರಮಿಡ್ಡುಗಳು' ಮತ್ತು 'ಅನ್ವೇಷಣೆಯ ಹಾದಿಯಲ್ಲಿ’ ಪ್ರಕಟಿತ ಕೃತಿಗಳು.

 

ಬಿ. ಸೀತಾರಾಮ ಭಟ್