About the Author

ಕತೆಗಾರ ಬನವಾಸಿ ವೆಂಕಟೇಶ ದೀಕ್ಷಿತ್ ಅವರ ಹುಟ್ಟೂರು ಪಂಪನ ಬನವಾಸಿ. ಶಿರಸಿಯಲ್ಲಿ ಬಿ. ಎಸ್ಸಿ. ಪದವಿ ಪೂರೈಸಿ ನಂತರ ಅಂಚೆ ಮತ್ತು ತಂತಿ ಇಲಾಖೆ, ಕಲಬುರ್ಗಿಯಿಂದ ವೃತ್ತಿ ಬದುಕನ್ನು ಆರಂಭಿಸಿದರು. ನಂತರ ಸೇನೆಯಲ್ಲಿ ವಾರೆಂಟ್ ಆಫೀಸರಾಗಿ ಕಾಶ್ಮೀರದ ಬಾರಾಮುಲಾ, ಕುಪ್ವಾಡ, ಶ್ರೀನಗರ, ದಿಲ್ಲಿಯಲ್ಲಿ ಸೇವೆ. ಪಿ ಎಂಡ್ ಟಿ ಫೈನಾನ್ಸ ಎಂಡ್ ಅಕೌಂಟ್ಸ ಸರ್ವೀಸ್ ಪರೀಕ್ಷೆ ಬರೆದು ಮುಂಬೈ ಟೆಲಿಫೋನ್ಸದಲ್ಲಿ ಕಿರಿಯ ಲೇಖಾಧಿಕಾರಿಯಾಗಿ ಸೇರಿದರು. ಕರ್ನಾಟಕದ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸಿದ ನಂತರ ಮುಖ್ಯಲೇಖಾಧಿಕಾರಿಯಾಗಿ ನಿವೃತ್ತಿ. ಅವರ 175 ಕ್ಕೂ ಹೆಚ್ಚು ಕತೆಗಳು ನಾಡಿನ ಮಾಸಪತ್ರಿಕೆ ವಾರಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅವರ ಮೊದಲ ಕತಾಸಂಕಲನ 'ಕಾವಡಿ'. `ಬೇರಿಗಂಟಿದ ಮಣ್ಣು’ ಅವರ ಮತ್ತೊಂದು ಕತಾ ಸಂಕಲನ. ಅವರ 'ನಕ್ಷತ್ರ ನುಂಗುವ ಸಮಯ' ಕಾದಂಬರಿ ಧಾರಾವಾಹಿಯಾಗಿ ಸುಧಾ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಬನವಾಸಿ ವೆಂಕಟೇಶ ದೀಕ್ಷಿತ್