ಬೇರಿಗಂಟಿದ ಮಣ್ಣು

Author : ಬನವಾಸಿ ವೆಂಕಟೇಶ ದೀಕ್ಷಿತ್

Pages 150

₹ 150.00
Year of Publication: 2019
Published by: ಪಲ್ಲವ ಪ್ರಕಾಶನ
Address: ಚನ್ನಪಟ್ಟಣ, ವ್ಹಯಾ ಎಮ್ಮಿಗನೂರು, ಬಳ್ಳಾರಿ - 583113
Phone: 9480353507

Synopsys

ನೂರೈವತ್ತಕ್ಕೂ ಹೆಚ್ಚಿನ ಕತೆಗಳನ್ನು ಬರೆದು ಕನ್ನಡ ಓದುಗರಿಗೆ ಚಿರಪರಿಚಿತರಾದ ಬನವಾಸಿ ವೆಂಕಟೇಶ ದೀಕ್ಷಿತ ಅವರ ಕತಾ ಸಂಕಲನ ‘ಬೇರಿಗಂಟಿದ ಮಣ್ಣು’ ಕತಾವಸ್ತುವಿನಿಂದ ವೈವಿಧ್ಯಮಯವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಲೇಖಕ ವಿವೇಕ ಶಾನಭಾಗ್ ಅವರು “ಒಂದು ಅನನ್ಯ ಆಲಿಂಗನ', 'ಗೂಳಿ' ಎಂಬ ಮಹತ್ವದ ಕತೆಗಳಲ್ಲಿ ದಾಂಪತ್ಯ ಹಾಗೂ ಗಂಡು ಹೆಣ್ಣಿನ ಸಂಬಂಧಗಳು ಆಳವಾದ ಪರೀಕ್ಷೆಗೆ ಒಳಪಡುತ್ತವೆ. ಇಲ್ಲಿ ವೈಯಕ್ತಿಕ ನೋವು ನಲಿವುಗಳು ಕೇವಲ ಅಷ್ಟಾಗಿ ಮಾತ್ರ ಉಳಿಯದೇ ಸುತ್ತಲಿನ ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುವ ಸಂಗತಿಗಳಾಗಿ ಬಿಡುತ್ತವೆ. 'ಬಾನಿಗೆ ಹಿಡಿದ ಬೊಗಸೆ' 'ನದಿ ಮತ್ತು ಸುಲಿ' ಯಂತಹ ಕತೆಗಳಲ್ಲಿ ಮನುಷ್ಯನ ಅಸ್ಮಿತೆಯ ಪ್ರಶ್ನೆಗಳನ್ನು ಬಹು ಸೂಕ್ಷ್ಮವಾಗಿ ನಿರ್ವಹಿಸಿದ್ದಾರೆ. ಹೀಗೆ ಭಾವನೆ ಚಿಂತನೆ ವಾಸ್ತವಗಳ ಹದವಾದ ಮಿಶ್ರಣವು ಇವರ ಎಲ್ಲ 5 ಯಶಸ್ವಿ ಕತೆಗಳ ಮುಖ್ಯ ಲಕ್ಷಣವಾಗಿದೆ.

ಇಲ್ಲಿಯ ಕಥಾಜಗತ್ತು ಸಮಾಜದ ಹಲವು ಪಾತಳಿಗಳಿಂದ ವಸ್ತುಗಳನ್ನು ಪಡೆದುಕೊಂಡಿದೆ. ಇದು ಇಂದಿನ ಸಂದರ್ಭದಲ್ಲಿ ಬಹಳ ಮಹತ್ವದ ಸಂಗತಿ. ಜಗತ್ತಿಗೆ ಹಲವು ಕೇಂದ್ರಗಳಿವೆ ಎಂಬುದನ್ನು ಗ್ರಹಿಸುವುದೇ ಬಹುತ್ವವನ್ನು ಗೌರವಿಸುವ ಮೊದಲ ಹೆಜ್ಜೆ. ಇಂತಹ ಲೋಕದೃಷ್ಟಿಯ ಕಾರಣದಿಂದ ದೀಕ್ಷಿತರ ಕತೆಗಳಲ್ಲಿರುವ ಪಾತ್ರಗಳು ಯಾವುದನ್ನೂ ಸಾರಾಸಗಟಾಗಿ ನಿರಾಕರಿಸದೇ ತೆರೆದ ಮನಸ್ಸಿನಿಂದ ಬದುಕನ್ನು ಸ್ವಾಗತಿಸುತ್ತವೆ. ಮನಮುಟ್ಟುವಂತೆ ಬರೆಯುವ ಅವರ ಕಥನಶಕ್ತಿಯಿಂದಾಗಿ ಪ್ರಸ್ತುತ ಈ ಸಂಕಲನದ ಕತೆಗಳು ಬಹಳ ಕಾಲ ನಮ್ಮೊಳಗೆ ಉಳಿದು ಬೆಳೆಯುತ್ತವೆ” ಎಂದು ಪ್ರಶಂಸಿಸಿದ್ದಾರೆ. 

About the Author

ಬನವಾಸಿ ವೆಂಕಟೇಶ ದೀಕ್ಷಿತ್

ಕತೆಗಾರ ಬನವಾಸಿ ವೆಂಕಟೇಶ ದೀಕ್ಷಿತ್ ಅವರ ಹುಟ್ಟೂರು ಪಂಪನ ಬನವಾಸಿ. ಶಿರಸಿಯಲ್ಲಿ ಬಿ. ಎಸ್ಸಿ. ಪದವಿ ಪೂರೈಸಿ ನಂತರ ಅಂಚೆ ಮತ್ತು ತಂತಿ ಇಲಾಖೆ, ಕಲಬುರ್ಗಿಯಿಂದ ವೃತ್ತಿ ಬದುಕನ್ನು ಆರಂಭಿಸಿದರು. ನಂತರ ಸೇನೆಯಲ್ಲಿ ವಾರೆಂಟ್ ಆಫೀಸರಾಗಿ ಕಾಶ್ಮೀರದ ಬಾರಾಮುಲಾ, ಕುಪ್ವಾಡ, ಶ್ರೀನಗರ, ದಿಲ್ಲಿಯಲ್ಲಿ ಸೇವೆ. ಪಿ ಎಂಡ್ ಟಿ ಫೈನಾನ್ಸ ಎಂಡ್ ಅಕೌಂಟ್ಸ ಸರ್ವೀಸ್ ಪರೀಕ್ಷೆ ಬರೆದು ಮುಂಬೈ ಟೆಲಿಫೋನ್ಸದಲ್ಲಿ ಕಿರಿಯ ಲೇಖಾಧಿಕಾರಿಯಾಗಿ ಸೇರಿದರು. ಕರ್ನಾಟಕದ ವಿವಿಧ ಭಾಗದಲ್ಲಿ ಸೇವೆ ಸಲ್ಲಿಸಿದ ನಂತರ ಮುಖ್ಯಲೇಖಾಧಿಕಾರಿಯಾಗಿ ನಿವೃತ್ತಿ. ಅವರ 175 ಕ್ಕೂ ಹೆಚ್ಚು ಕತೆಗಳು ನಾಡಿನ ಮಾಸಪತ್ರಿಕೆ ವಾರಪತ್ರಿಕೆಗಳಲ್ಲಿ ...

READ MORE

Related Books