About the Author

ಲೇಖಕ ಬಸವರಾಜ ಐನೋಳ್ಳಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಂದಾಪುರದವರು. ವೃತ್ತಿಯಿಂದ ಶಿಕ್ಷಕರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಚಿಂಚೋಳಿ ತಾಲೂಕಿನ ಅಧ್ಯಕ್ಷರು ಹೀಗೆ ವಿವಿಧ ವಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. 

ಕೃತಿಗಳು: ನೆನಪು, ಬುಗ್ಗಿ, ನಲಿವು ಕೊಲ್ಲುವ ನೋವುಗಳು,  ಉಮಾಚಲ ಕಾವ್ಯ (ಕವನ ಸಂಕಲನಗಳು), ಮಕ್ಕಳ ನಾಟಕಗಳು, ಬಿಸಿಲ ನಾಡಿನ ಹಸಿರು (ಸಂಸ್ಮರಣೆ), ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣದ ಏಳು-ಬೀಳು (ಶೈಕ್ಷಣಿಕ ಕೃತಿ), ಪ್ರಬಂಧ ಮತ್ತು ಪತ್ರಲೇಖನಗಳು, ಮುಳ್ಳಿನ ಗದ್ದುಗೆಯ ಮೇಲೆ ಮುಖ್ಯಗುರುಗಳು (ಶೈಕ್ಷಣಿಕ ಕೃತಿ), ಚಿಂತನ ಚೇತನ (ಆಕಾಶವಾಣಿ ಪ್ರಸಾರಿತ ಬರಹಗಳ ಕೃತಿ), ಕನ್ನಡ ಶಾಲೆಗಳು ಉಳಿಯಲಿ (ಶೈಕ್ಷಣಿಕ ಕೃತಿ), ಬರ್‍ತಾರಂತ ಬರ್‍ತಾರಂತ ಚೆನ್ನಬಸವಣ್ಣ ಬರ್‍ತಾರಂತ (ಜಾನಪದ), ಗಾನಕೋಗಿಲೆ ರೇವಣಸಿದ್ದಯ್ಯ  ಹಿರೇಮಠ (ವ್ಯಕ್ತಿಚಿತ್ರಣ) 

ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, ಕಲಬುರಗಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಜಿಡಗಾ ಮುಗಳಖೋಢ ಮಠದಿಂದ ರಾಷ್ಟ್ರಶಿಲ್ಪಿ ಪ್ರಶಸ್ತಿ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ನಿಂದ ಗುರುಶ್ರೇಷ್ಠ ಪ್ರಶಸ್ತಿ, ಕರ್ನಾಟಕ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಬೀದರ ಜಿಲ್ಲಾ ಕವಿಸಮ್ಮಳನದಲ್ಲಿ ಸಾಹಿತ್ಯ ಚೇತನ ಪ್ರಶಸ್ತಿ ಸೇರಿದಂತೆ ಹಲವಾರು ಪುರಸ್ಕಾರಗಳು ಲಭಿಸಿವೆ. 

 

 

ಬಸವರಾಜ ಐನೋಳ್ಳಿ

(05 Feb 1966)