About the Author

ಡಾ. ಬೆಳವಾಡಿ ಮಂಜುನಾಥ ಅವರು ಚಿಕ್ಕಮಗಳೂರು ಜಿಲ್ಲೆ ಬೆಳವಾಡಿಯಲ್ಲಿ ಜನಿಸಿದರು ಪ್ರಾಥಮಿಕ ವಿದ್ಯಾಭ್ಯಾಸ ಬೆಳವಾಡಿ ಸರ್ಕಾರಿ ಶಾಲೆ.ಪ್ರೌಢ ಶಿಕ್ಷಣ ಕಳಸಾಪುರ ವಿನಾಯಕ ಪ್ರೌಢಶಾಲೆ.ಚಿಕ್ಕಮಗಳೂರು ಐ.ಡಿ.ಎಸ್. ಜಿ ಸರ್ಕಾರಿ ಕಾಲೇಜಿನಿಂದ ಬಿ.ಎ ಪದವಿ. ಮೈಸೂರು ವಿಶ್ವ ವಿದ್ಯಾನಿಲಯದಿಂದ ಕನ್ನಡ ಎಂ. ಎ ಪ್ರಥಮ ಶ್ರೇಣಿಯೊಂದಿಗೆ ಚಿನ್ನದ ಪದಕ.ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದಿಂದ ಸಮಾಜಶಾಸ್ತ್ರದಲ್ಲಿ ಎಂ.ಎ. ಕುವೆಂಪು ವಿಶ್ವ ವಿದ್ಯಾನಿಲಯದಿಂದ ಬಿ.ಇಡಿ ಪದವಿ. ಧಾರವಾಡ ದ ಕರ್ನಾಟಕ ವಿಶ್ವ ವಿದ್ಯಾಲಯದಿಂದ ಪಿ.ಎಚ್ ಡಿ.ಪದವಿ.

ಚನ್ನರಾಯ ಪಟ್ಟಣ ಉಪನ್ಯಾಸಕರಾಗಿ ವೃತ್ತಿ ಪ್ರಾರಂಭಿಸಿದರು. . ಮೂಡಿಗೆರೆ ಹಾಗೂ ಚಿಕ್ಕಮಗಳೂರು ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಳೆದ ಮೂವತ್ತು ವರ್ಷಗಳಿಂದ ಸೇವೆ. ಕರ್ನಾಟಕ ರಾಜ್ಯ ಪಠ್ಯಪುಸ್ತಕ ರಚನಾ ಸಮಿತಿಯ ಸದಸ್ಯ ಹಾಗೂ ಪರಿಶೀಲಕ.

ವಿದ್ಯಾರ್ಥಿ ದಿಶೆಯಲ್ಲೇ ಸಾಹಿತ್ಯಲೋಕಕ್ಕೆ ಪ್ರವೇಶ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ 45 ಸ್ವಂತ ಕೃತಿಗಳ ರಚನೆ ಮತ್ತು 50 ವಿವಿಧ ಗ್ರಂಥಗಳ ಸಂಪಾದಕರು. ಉದ್ಭವ ಪ್ರಕಾಶನ ಟ್ರಸ್ಟ್ ನ ಸ್ಥಾಪಕ ಮತ್ತು ಪ್ರಧಾನ ಕಾರ್ಯದರ್ಶಿ.

ಪ್ರಶಸ್ತಿಗಳು: ಯುವಚೇತನ ಪ್ರಶಸ್ತಿ. ಸಾರ್ವಜನಿಕ ಶಿಕ್ಷಣ ಇಲಾಖೆಯ ಜನಮೆಚ್ಚಿದ ಶಿಕ್ಷಕ ಪ್ರಶಸ್ತಿ. ಜಿಲ್ಲಾ ಕನ್ನಡರಾಜ್ಯೋತ್ಸವ ಪ್ರಶಸ್ತಿ. ಸರ್.ಎಂ. ವಿಶ್ವೇಶ್ವರಯ್ಯ ರಾಜ್ಯ ಪ್ರಶ ಸ್ತಿ. ಕಾಮಧೇನು ಸೇವಾಪ್ರಶ ಸ್ತಿ. ಕಾಳಿಪುರಸ್ಕಾರ. ರೋಟರಿ ಅಂತಾರಾಷ್ಟ್ರೀಯ ಸಂಸ್ಥೆಯ ಪುರಸ್ಕಾರ. . ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯಸಿರಿ ಅಭಿದಾನ. ಸಾಂಸ್ಕೃತಿಕ ಸಂಘದ ವಿದ್ಯಾವಾಚಸ್ಪತಿ ಅಭಿದಾನ.

ಬೆಳವಾಡಿ ಮಂಜುನಾಥ

(18 Jun 1966)