About the Author

ಲೇಖಕ ಡಾ. ಭದ್ರಾವತಿ ರಾಮಾಚಾರಿ ಅವರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ (ಜನನ: 09-08-1972) ತಾಲೂಕಿನ ಬೊಮ್ಮನಕಟ್ಟೆ ಗ್ರಾಮದವರು. ತಂದೆ ವೀರಾಚಾರಿ, ತಾಯಿ ಪಾರ್ವತಮ್ಮ, ಕನ್ನಡದಲ್ಲಿ ಎಂ.ಎ. ಪದವೀಧರರು.

ಕೃತಿಗಳು: ಚೈತ್ರ ತಂದ ಚಿಗುರು, ಹರಕೆ, ನೆನಪೊಂದೇ ಶಾಶ್ವತ,  ಭಾವನದೀ, ಅಮ್ಮಾ...ನನ್ನನ್ನೂ ‌ಸ್ವಲ್ಪ ಅರ್ಥ ಮಾಡ್ಕೋ, ಆಶಾಕಿರಣ(ಇವು ಕಾದಂಬರಿಗಳು), ದೀಪ ಹಚ್ಚುವ ಸಮಯ(ಕಥಾಸಂಕಲನ), ಆಶಾ ಕಿರಣ(ಮಕ್ಕಳ ಕಾದಂಬರಿ), ಅಭಿರಾಮಿ ಮತ್ತು ಇತರ ಕಥೆಗಳು, ನಮ್ಮ ಬದುಕಿನ ಸುತ್ತ, ಕನಸುಗಳು ನೂರಾರು, ಹೊಸ ಚಿಗುರು(ಸಂಪಾದಿತ ಕೃತಿ), ತುಂತುರು ಮಳೆ ಹನಿ(ಸಂಪಾದಿತ ಕೃತಿ), ಪಯಣಿಗರು, ಬೆಳಕು ನೀನಾದೆ, ಬೇವರ್ಸಿ ಬರೆದ ಕಥೆಗಳು (ಇವು ಕಥಾ ಸಂಕಲನಗಳು), ಭದ್ರಾವತಿ ಆಕಾಶವಾಣಿಯಿಂದ 12 ಕಥೆಗಳು, ರಶ್ಮಿ, ಸಂದರ್ಶನ, ನಾಟಕಗಳು ಪ್ರಸಾರವಾಗಿವೆ. ಸುವರ್ಣ ಸ್ವಾತಂತ್ರ್ಯ ನಾಟಕ ರಚನೆ, ಕರ್ನಾಟಕd ಎಲ್ಲ ಬಾನುಲಿ ಕೇಂದ್ರದಿಂದ ಏಕಕಾಲಕ್ಕೆ ಪ್ರಸಾರವಾಗಿವೆ. ನಾಡಿನ ವಿವಿಧ ದಿನಪತ್ರಿಕೆ, ಪಾಕ್ಷಿಕ-ಮಾಸಿಕ ಪತ್ರಿಕೆಗಳಲ್ಲಿ 386ಕ್ಕೂ ಹೆಚ್ಚು ಕತೆ-ಲೇಖನಗಳು ಪ್ರಕಟವಾಗಿವೆ. 

ಉಂಡೂ ಹೋದ ಕೊಂಡೂ ಹೋದ, ಉದ್ಭವ , ಕರ್ಣನ ಸಂಪತ್ತು , ಬಾಳನೌಕೆ, ಕ್ಷಮೆ ಹೀಗೆ ವಿವಿಧ ಚಲನಚಿತ್ರಗಳಿಗೆ ಹಾಗೂ ಪ್ರತಿಬಿಂಬ, ಲಾಲಿ,  ಗಂಗೋತ್ರಿ, ಬಾಳ ಅನುಬಂಧ, ಆಸ್ಫೋಟನೆ ಹೀಗೆ ಟಿ.ವಿ. ಧಾರವಾಹಿಗಳಿಗೆ ಸಹಾಯಕ ನಿದೇರ್ಶಕರಾಗಿ ಕೆಲಸ ಮಾಡಿದ್ದಾರೆ. ಕಾವ್ಯಾ, ಅವಳೂ ಹೆಣ್ಣಲ್ಲವೇ? ಮುಂಜಾನೆ ಸತ್ಯ,, ಇವರೂ ನಮ್ಮವರೇ?, ಕಲಾವಿದ, ಮನನ ಮನಸ್ಸು,, ಬೇಸಿಗೆ ರಜಾ ಹೀಗೆ ಕಿರುತೆರೆ ಧಾರಾವಾಹಿಗಳನ್ನು ಸ್ವತಂತ್ರವಾಗಿ ನಿರ್ದೇಶಿಸಿದ್ದಾರೆ. 

ಪ್ರಶಸ್ತಿ-ಗೌರವಗಳು: ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ (1996) 'ಅತ್ಯ್ತುತ್ತಮ ಚಿತ್ರಕಥೆ ಬರಹಗಾರ ಪ್ರಶಸ್ತಿ',1999 ರಲ್ಲಿ ಪೊಲೀಸ್ ಇಲಾಖೆಯಿಂದ ಸನ್ಮಾನ. 2001ರಲ್ಲಿ ಕನ್ನಡ ಸಾಹಿತ್ಯ ಪರಿ‍ಷತ್ತಿನಿಂದ ಸನ್ಮಾನ, 2002ರಲ್ಲಿ ಶ್ರೀ ಎಂ.ಜಿ.ರಂಗನಾಥನ್ ಸ್ಮಾರಕ ಪುಸ್ತಕ ಪ್ರಶಸ್ತಿ., 2015ರಲ್ಲಿ ಭಾರತೀಯ ಕರ್ನಾಟಕ ಸಂಘದಿಂದ 'ಕಥಾ ಪ್ರಶಸ್ತಿ', 2016 ರಲ್ಲಿ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯಿಂದ 'ಕರ್ನಾಟಕ ಭೂಷಣ' ಪ್ರಶಸ್ತಿ ಹಾಗೂ ಭಾರತರತ್ನ ಸರ್ ಎಂ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನದಿಂದ  'ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ'. 2017 ರಲ್ಲಿ ಇಂಡಿಯನ್ ವರ್ಚುಯಲ್ ವಿಶ್ವವಿದ್ಯಾನಿಲಯದಿಂದ(ಶಾಂತಿ ಮತ್ತು ಶಿಕ್ಷಣಕ್ಕಾಗಿ) ಗೌರವ ಡಾಕ್ಟರೇಟ್ ಪಡೆದಿದ್ದಾರೆ. 

ಭದ್ರಾವತಿ ರಾಮಾಚಾರಿ

(09 Aug 1972)