About the Author

ಪತ್ರಕರ್ತ, ಲೇಖಕ ಚಂದ್ರಹಾಸ ಚಾರ್ಮಡಿ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ಪರ್ಲಾನಿಯವರು. ಎಂ.ಎ.ಪದವಿ(ಕನ್ನಡ), ಎಂ.ಎ.ಪತ್ರಿಕೋದ್ಯಮ(ಎಂ.ಸಿ.ಜೆ) ಪದವೀಧರರಾಗಿರುವ ಅವರು 2016ರಿಂದ ಹಂಪಿ ವಿಶ್ವವಿದ್ಯಾನಿಲಯದಡಿ ಕರಾವಳಿ ಕರ್ನಾಟಕದ ಕಥನ ಸಾಹಿತ್ಯದಲ್ಲಿ ಸಂಘರ್ಷ ಮತ್ತು ಸಾಮರಸ್ಯದ ಸ್ವರೂಪಗಳು ಎಂಬ ವಿಷಯದ ಕುರಿತು ಪಿಎಚ್.ಡಿ ಸಂಶೋಧನೆ ಕೈಗೊಂಡಿದ್ದಾರೆ. ಎಸ್ಸೆಸೆಲ್ಸಿ ಮುಗಿಸಿ ಬೆಂಗಳೂರಿನ ಮಾಧ್ಯಮ ಲೋಕದಲ್ಲಿ ವೃತ್ತಿ ಬದುಕು ಆರಂಭಿಸಿದ ಅವರು ಕಳೆದ ಒಂದು ದಶಕದಿಂದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಪ್ರಕಟಗೊಳ್ಳುತ್ತಿರುವ ರಾಜ್ಯದ ಅತೀ ಹೆಚ್ಚು 5.50 ಲಕ್ಷ ಪ್ರಸಾರವುಳ್ಳ ‘ನಿರಂತರ ಪ್ರಗತಿ’ ಮಾಸಪತ್ರಿಕೆಯಲ್ಲಿ ವರದಿಗಾರನಾಗಿ, ಉಪಸಂಪಾದಕನಾಗಿ ದುಡಿದು. ಪ್ರಸ್ತುತ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ಬರಹ, ನಟನೆ, ಕಾರ್ಯಕ್ರಮ ನಿರ್ದೇಶನ, ಛಾಯಾಗ್ರಹಣ, ವೀಡಿಯೋ ಎಡಿಟಿಂಗ್ ಇವರ ಆಸಕ್ತಿಯ ಕ್ಷೇತ್ರ.  

ಏಳನೇ ತರಗತಿಯಿಂದಲೇ ಬರವಣಿಗೆ ಮೂಲಕ ಪತ್ರಿಕಾರಂಗಕ್ಕೆ ಕಾಲಿರಿಸಿದ ಇವರ ಸುಮಾರು 10 ಸಾವಿರಕ್ಕೂ ಅಧಿಕ ಬರಹಗಳು ದಿನಪತ್ರಿಕೆ, ವಾರ, ಮಾಸ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಮಣ್ಣು ಬೇಡಿದ ಜೀವ’ ಇವರ ಮೊದಲ ಕಾದಂಬರಿ. ನುಡಿ ಚಿತ್ರ, ಹುಡುಕಾಟ ಕೃತಿಗಳನ್ನು ಪ್ರಕಟಿಸಿರುವ ಇವರು  ‘ಎನ್ನಿಲೆಕ್ಕ ಮಾಂತಲಿಪ್ಪುಜಿ’ ಎಂಬ ತುಳು ನಾಟಕವನ್ನು ರಚಿಸಿದ್ದಾರೆ. 

ಪತ್ರಿಕೋದ್ಯಮ ಮತ್ತು ಬರಹಗಳಿಗಾಗಿ ದ.ಕ. ಕಾರ್ಯನಿರತ ಪತ್ರಕರ್ತರ ಸಂಘ, ಮಂಗಳೂರು ಇವರು ಹಿರಿಯ ಪತ್ರಕರ್ತ ದಿ.ಪದ್ಯಾಣ ಗೋಪಾಲಕೃಷ್ಣ ಭಟ್ ಸ್ಮರಣಾರ್ಥ ಕೊಡಮಾಡುವ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆ ಪ್ರಶಸ್ತಿ- 2015 ಪಡೆದಿದ್ದಾರೆ, ಜೊತೆಗೆ ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಪ್ರಕಟಿತ ಬರಹಗಳಿಗೆ ಕೊಡಮಾಡುವ 2013-14ನೇ ಸಾಲಿನ ಅತ್ಯುತ್ತಮ ಲೇಖನ ಪ್ರಶಸ್ತಿ, ಮಂಗಳೂರಿನ ಕಥಾಬಿಂದು ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಿದವರಿಗೆ ಕೊಡಲ್ಪಡುವ ಸೌರಭ ರತ್ನ ರಾಜ್ಯ ಪ್ರಶಸ್ತಿ, - 2018, ಸುಕೃತ ಕೃಷಿ ಸಂಚಾಲನಾ ಸಮಿತಿ ಪ್ರಕಟಿತ ಅತ್ಯುತ್ತಮ ಕೃಷಿ ಲೇಖನಕ್ಕೆ ನೀಡುವ ರಾಜ್ಯ ಮಟ್ಟದ ಸುಕೃತ ಕೃಷಿ ಲೇಖನ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. 

ಚಂದ್ರಹಾಸ ಚಾರ್ಮಾಡಿ

(24 May 1986)

Books by Author

BY THE AUTHOR