About the Author

ಲೇಖಕ ಚಂದ್ರಕಾಂತ ಮ. ತಾಳಿಕೋಟಿ 1956 ಮೇ 27 ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದರು. ಪ್ರೌಢಶಾಲಾ ಶಿಕ್ಷಕರಾಗಿ ನಿವೃತ್ತಿ ಹೊಂದಿದ್ದಾರೆ. ತಂದೆ ಮಹಾಗುಂಡಪ್ಪ ತಾಯಿ ಗಂಗಾಬಾಯಿ. ರಾಷ್ಟ್ರಪತಿ ಡಾ.ಎ. ಪಿ. ಜೆ ಅಬ್ದುಲ್ ಕಲಾಂ ಅವರು ಉತ್ತಮ ಶಿಕ್ಷಕ ಎಂದು ರಾಷ್ಟ್ರೀಯ ಪ್ರಶಸ್ತಿ ಪತ್ರ ಹಾಗೂ ಬೆಳ್ಳಿ ಪದಕ ಪ್ರದಾನ ಮಾಡಿದ್ದಾರೆ.

ಅವರ ಅನೇಕ ಕತೆಗಳು ನಾಡಿನ ವಿವಿಧ ದಿನಪತ್ರಿಕೆ, ವಾರ ಪತ್ರಿಕೆ ಹಾಗೂ ಮಾಸ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಲವು ಕಥೆಗಳು ಕಥಾಸ್ಪರ್ಧೆಯಲ್ಲಿ ಬಹುಮಾನ ಗಳಿಸಿವೆ. 'ದೃಷ್ಟಿ' ಕಾದಂಬರಿಯು ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ 'ಪ್ರಪಂಚ' ವಾರಪತ್ರಿಕೆಯಲ್ಲಿ 1979 ರಲ್ಲಿ ಪ್ರಕಟವಾಗಿತ್ತು. ಅವರ ಇನ್ನೊಂದು ಕಾದಂಬರಿ 'ಕಪ್ಪು ಡೈರಿ' ಕರ್ಮವೀರ ವಾರಪತ್ರಿಕೆಯಲ್ಲಿ 2017 ರಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿದೆ. 2008ರ 'ದೊಡ್ಡ ಮರ', 2009ರ 'ಉಂಗುಟ', 2012ರ 'ರೂಪ ಗಂಧ ಸ್ಪರ್ಶ' ಕಥಾಸಂಕಲನಗಳಿಗೆ ಹಾಗೂ 2010ರ 'ದೃಷ್ಟಿ' ಕಾದಂಬರಿಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇವರಿಂದ ದತ್ತಿ ಪ್ರಶಸ್ತಿ ಲಭಿಸಿವೆ. ಅವರು 2020 ಸೆಪ್ಟಂಬರ್‌ 02ರಂದು ನಿಧನರಾದರು.

ಚಂದ್ರಕಾಂತ ಮ. ತಾಳಿಕೋಟಿ

(27 May 1956-02 Sep 2020)