About the Author

ಲೇಖಕ ಡಾ. ಚಂದ್ರಶೇಖರ ದಾಮ್ಲೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧಕರು, ಹವ್ಯಾಸಿ ಯಕ್ಷಗಾನ ಕಲಾವಿದರು, ಅಂಕಣಕಾರರು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರು, ಸಾಹಿತಿ, ಶಿಕ್ಷಣ ತಜ್ಞರು, ಕೃತಿಕಾರರು ಹಾಗೂ ವಿಚಾರ ಸಂಕಿರಣಗಳ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ‘ಮನೆಮನೆ ಇಂಗುಗುಂಡಿ’ ಅಭಿಯಾನದ ಮೂಲಕ ಜಲ ಸಾಕ್ಷರತೆಗಾಗಿ ದುಡಿಯುತ್ತಿದ್ದಾರೆ. ಸುಳ್ಯದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯನ್ನು 1996 ರಲ್ಲಿ ಆರಂಭಿಸಿ, ಅದರ ಸ್ಥಾಪಕಾಧ್ಯಕ್ಷರಾಗಿ ಕನ್ನಡ ಮಾಧ್ಯಮ ಶಾಲೆಯನ್ನು ನಡೆಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ ಹಾಗೂ ಸರಕಾರಿ ಶಾಲೆಗಳ ಸಬಲೀಕರಣ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕೃತಿಗಳು: ಜ್ಞಾನಯಜ್ಞ. ( ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಬೆಳೆಸಿದ  ಶೈಕ್ಷಣಿಕ ಸಂಸ್ಥೆಗಳ ಸಾಧನೆ ಕುರಿತ ಕೃತಿ)

ಪ್ರಶಸ್ತಿ-ಪುರಸ್ಕಾರಗಳು: ರಾಜ್ಯ ಮಟ್ಟದ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ರಾಜ್ಯಮಟ್ಟದ ಅತ್ಯುತ್ತಮ ಕಾಲೇಜು ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಸ್ನೇಹ ಶಾಲಾ ಆವರಣದಲ್ಲಿ ಸಮಗ್ರ ಪರಿಸರ ಸಂರಕ್ಷಣೆಗಾಗಿ ಇವರಿಗೆ ಕರ್ನಾಟಕ ಅರಣ್ಯ ಇಲಾಖೆಯಿಂದ ಅರಣ್ಯ ಮಿತ್ರ ಪ್ರಶಸ್ತಿ ಹಾಗೂ ದ.ಕ.ಜಿಲ್ಲಾ ಪಂಚಾಯತ್ ನಿಂದ ಜಲ ಮಿತ್ರ ಪ್ರಶಸ್ತಿಗಳು ಲಭಿಸಿವೆ.

ಚಂದ್ರಶೇಖರ ದಾಮ್ಲೆ