ನೆಲದ ನಂಟು

Author : ಚಂದ್ರಶೇಖರ ದಾಮ್ಲೆ

Pages 314

₹ 320.00




Year of Publication: 2021
Published by: ಸಮನ್ವಿತ ಪ್ರಕಾಶನ
Address: ಬೆಂಗಳೂರು
Phone: 9844192952

Synopsys

ಲೇಖಕ ಚಂದ್ರಶೇಖರ ದಾಮ್ಲೆ ಅವರ ಕಾದಂಬರಿ-ನೆಲದ ನಂಟು. 20ನೇ ಶತಮಾನದಲ್ಲಿ ಭೂ ಸುಧಾರಣೆಯ ಕಾನೂನುಗಳು ಸಾಮಾಜಿಕ-ಆರ್ಥಿಕ ಪರಿಣಾಮಗಳನ್ನು ಸೃಷ್ಟಿಸಿದವು. ಶೋಷಕರು, ಶೋಷಿತರು, ಕೃಷಿ ಕಾರ್ಮಿಕರ ಬದುಕಿನಲ್ಲಿ ಪಲ್ಲಟಗಳಾದವು ಈ ಕುರಿತ ಕಾದಂಬರಿ ಇದು. ಹಿರಿಯ ಸಾಹಿತಿ ಡಾ. ನರೇಂದ್ರ ರೈ ದೇರ್ಲ ಅವರು ಕೃತಿಯ ಕುರಿತು `ಭೂಸುಧಾರಣೆ ಮತ್ತು ಗ್ರಾಮೀಣ ಸಾಮಾಜಿಕ ಪರಿವರ್ತನೆ` ಎಂಬ ಡಾಕ್ಟರೇಟ್ ಪ್ರಬಂಧಕ್ಕಾಗಿ ಅವರು ನಡೆಸಿದ ಕೇತ್ರಕಾರ್ಯವೇ `ನೆಲದ ನಂಟು` ಕಾದಂಬರಿಯ ಮೂಲಪಾಯ. ಹಾಗಂತ `ನೆಲದ ನಂಟು` ಎಲ್ಲೂ ಥೀಸಿಸ್ ಮಾದರಿಯಾಗಿ ದತ್ತಾಂಶಗಳ ಅಂಟಿನಲ್ಲಿ, ಅಡಿಟಿಪ್ಪಣಿಯ ಹೊರೆಯಲ್ಲಿ ಕುಸಿಯುವುದಿಲ್ಲ. ಈ ಕಾದಂಬರಿ ನೆಲದವರ ಸ್ವಾಭಿಮಾನದ ಪ್ರಶ್ನೆಯನ್ನು ಅವರ ಅಂತರ್ಯದ ನೆಲೆಯಲ್ಲಿ ಚರ್ಚಿಸುತ್ತದೆ. ಈ ಕಥಾನಕ ಎಲ್ಲೂ ಪಾತ್ರಗಳ ಬೆನ್ನುಬೀಳದೆ ವಿಷಯಾಧಾರದಲ್ಲೇ ಚರ್ಚಿಸುತ್ತದೆ. ಇದು ಡಾ. ದಾಮ್ಲೆ ಅವರ ಮೊದಲ ಕಾದಂಬರಿಯೇ ಆದರೂ ವಿಷಯ - ಅಧ್ಯಯನದ ಪಳಗುವಿಕೆ ಸೃಜನಶೀಲ ದಾರಿಯಲ್ಲಿ ಗೆದ್ದಿದೆ.’ ಎಂದು ಪ್ರಶಂಸಿಸಿದ್ದಾರೆ.

About the Author

ಚಂದ್ರಶೇಖರ ದಾಮ್ಲೆ

ಲೇಖಕ ಡಾ. ಚಂದ್ರಶೇಖರ ದಾಮ್ಲೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿದ್ದಾರೆ. ಸಂಶೋಧಕರು, ಹವ್ಯಾಸಿ ಯಕ್ಷಗಾನ ಕಲಾವಿದರು, ಅಂಕಣಕಾರರು, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟಕರು, ಸಾಹಿತಿ, ಶಿಕ್ಷಣ ತಜ್ಞರು, ಕೃತಿಕಾರರು ಹಾಗೂ ವಿಚಾರ ಸಂಕಿರಣಗಳ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ‘ಮನೆಮನೆ ಇಂಗುಗುಂಡಿ’ ಅಭಿಯಾನದ ಮೂಲಕ ಜಲ ಸಾಕ್ಷರತೆಗಾಗಿ ದುಡಿಯುತ್ತಿದ್ದಾರೆ. ಸುಳ್ಯದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯನ್ನು 1996 ರಲ್ಲಿ ಆರಂಭಿಸಿ, ಅದರ ಸ್ಥಾಪಕಾಧ್ಯಕ್ಷರಾಗಿ ಕನ್ನಡ ಮಾಧ್ಯಮ ಶಾಲೆಯನ್ನು ನಡೆಸುತ್ತಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕನ್ನಡ ಜಾಗೃತ ಸಮಿತಿ ಹಾಗೂ ಸರಕಾರಿ ಶಾಲೆಗಳ ಸಬಲೀಕರಣ ಸಮಿತಿಗಳ ಸದಸ್ಯರಾಗಿಯೂ ...

READ MORE

Related Books