About the Author

ಕವಿ, ಬರಹಗಾರ ಚೆನ್ನಣ್ಣ ವಾಲೀಕಾರ ಅವರು 1943 ಏಪ್ರಿಲ್ 6ರಂದು ಗುಲ್ಬರ್ಗ ಜಿಲ್ಲೆ ಚಿತ್ತಾಪುರ ತಾಲ್ಲೂಕು ಶಂಕರವಾಡ ಗ್ರಾಮದಲ್ಲಿ ಜನಿಸಿದರು. ತಾಯಿ ಸಾಬಮ್ಮ, ತಂದೆ ಧೂಳಪ್ಪ. ಗುಲ್ಬರ್ಗದ ಶರಣ ಬಸವೇಶ್ವರ ಕಲಾ ಕಾಲೇಜಿನಲ್ಲಿ ಬಿ.ಎ.ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ವಾಲೀಕರ ಅವರು ರಾಯಚೂರು ಕಾಲೇಜಿನ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಸೆನೆಟ್‌ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. 

ಪ್ರಮುಖ ಕೃತಿಗಳು: ಮರದ ಮೇಲಿನ ಗಾಳಿ, ಹಾಡಕ್ಕಿ ಹಾಗೂ ಇತರ ಪದಗಳು, ಪ್ಯಾಂಥರ್ ಪದ್ಯಗಳು, ಧಿಕ್ಕಾರದ ಹಾಡುಗಳು, ಆಯ್ದ ಕವನಗಳು, ಐದು ಜನಪದ ಸಮಾಜವಾದಿ ಕಾವ್ಯಗಳು (ಕವನ ಸಂಕಲನಗಳು); ಕಪ್ಪುಕಥೆಗಳು, ಹುತ್ತದಲ್ಲಿ ಕುದ್ದವರ ಕಥೆಗಳು (ಕಥಾ ಸಂಕಲನಗಳು); ಬೆಳ್ಯ, ಕೋಟೆ ಬಾಗಿಲು, ಹುಲಿಗಮ್ಮ, ಗ್ರಾಮಭಾರತ, ಒಂದು ಹೆಂಚಿನ ಒಳ ಜಗತ್ತು (ಕಾದಂಬರಿಗಳು) ಮೋಹರಂ ಪದಗಳು, ಮದುವೆ ಹಾಡುಗಳು (ಸಂಪಾದನೆ), ಒಂದು ಗ್ರಾಮದ ಜಾನಪದೀಯ ಅಧ್ಯಯನ, ಒಂದು ಸಾಂಸ್ಕೃತಿಕ ಅಧ್ಯಯನ, ಕರ್ನಾಟಕದಲ್ಲಿ ದೇವದಾಸಿ ಪದ್ಧತಿ (ಸಂಶೋಧನೆ) ಮುಂತಾದವು. 

ಚೆನ್ನಣ್ಣ ವಾಲೀಕಾರ ಅವರಿಗೆ ರಾಜ್ಯ ಸರಕಾರದ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಮುಂತಾದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ. ಅವರು 2019 ನವೆಂಬರ್‌ 25ರಂದು ನಿಧನರಾದರು.

ಚೆನ್ನಣ್ಣ ವಾಲೀಕಾರ

(06 Apr 1943-23 Nov 2019)