ಕುತ್ತದಲ್ಲಿ ಕುದ್ದವರ ಕತೆಗಳು

Author : ಚೆನ್ನಣ್ಣ ವಾಲೀಕಾರ

Pages 112

₹ 100.00
Year of Publication: 2019
Published by: ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘ
Address: ಕಲಬುರಗಿ

Synopsys

ಖ್ಯಾತ ಸಾಹಿತಿ ಡಾ. ಚೆನ್ನಣ್ಣ ವಾಲೀಕಾರ ಅವರ ಕಥಾ ಸಂಕಲನ-ಕುತ್ತದಲ್ಲಿ ಕುದ್ದವರ ಕಥೆಗಳು. ಅಜ್ಞಾನ, ಅನಕ್ಷರತೆ, ಅಂಧಶ್ರದ್ಧೆ, ಜಗಳಗಳನ್ನು ಕಾಪಿಟ್ಟುಕೊಂಡು ಹೋಗುವ ಬಡತನವನ್ನು ಮೇಲ್ವರ್ಗದ, ಮೇಲುಜಾತಿಯ ಶ್ರೀಮಂತರು ಹೇಗೆ ಲಾಭದಾಯಕವನ್ನಾಗಿ ಮಾಡಿಕೊಂಡಿರುತ್ತಾರೆ ಎಂಬುದರ ಸ್ಪಷ್ಟ ಚಿತ್ರಣ ಇಲ್ಲಿದೆ. ವೈಚಾರಿಕ, ಚಾರಿತ್ರಿಕ ಹಿನ್ನೆಲೆಯನ್ನು ಕಟ್ಟಿಕೊಂಡು ಬರೆದಿದ್ದು, ಜನಸಾಮಾನ್ಯರ ಭಾಷೆಯನ್ನು ಬಳಸಿ ನಿತ್ಯಬದುಕಿನ ಹತ್ತಾರು ಮುಖಗಳನ್ನು ಕಥೆಯಲ್ಲಿ ಕಾಣಿಸಿದ್ದಾರೆ. ರೈತ ಕಾರ್ಮಿಕ, ಮಹಿಳೆಯರ ಸಮಸ್ಯೆ, ಶೋಷಣೆಯ ಬೇರು ಭಾರತೀಯ ಸಾಮಾಜಿಕ ಸಾಂಸ್ಕೃತಿಕ ಲೋಕದಲ್ಲಿ ಹೇಗೆ ಆಳದಲ್ಲಿದೆ ಎಂಬುದನ್ನು ತೋರಲಾಗಿದೆ.

About the Author

ಚೆನ್ನಣ್ಣ ವಾಲೀಕಾರ
(06 April 1943 - 23 November 2019)

ಕವಿ, ಬರಹಗಾರ ಚೆನ್ನಣ್ಣ ವಾಲೀಕಾರ ಅವರು 1943 ಏಪ್ರಿಲ್ 6ರಂದು ಗುಲ್ಬರ್ಗ ಜಿಲ್ಲೆ ಚಿತ್ತಾಪುರ ತಾಲ್ಲೂಕು ಶಂಕರವಾಡ ಗ್ರಾಮದಲ್ಲಿ ಜನಿಸಿದರು. ತಾಯಿ ಸಾಬಮ್ಮ, ತಂದೆ ಧೂಳಪ್ಪ. ಗುಲ್ಬರ್ಗದ ಶರಣ ಬಸವೇಶ್ವರ ಕಲಾ ಕಾಲೇಜಿನಲ್ಲಿ ಬಿ.ಎ.ಪದವಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು. ಪ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಿಸಿದ ವಾಲೀಕರ ಅವರು ರಾಯಚೂರು ಕಾಲೇಜಿನ ಉಪನ್ಯಾಸಕರಾಗಿ, ಪ್ರಾಧ್ಯಾಪಕರಾಗಿ, ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷರಾಗಿ, ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, ಸೆನೆಟ್‌ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ.  ಪ್ರಮುಖ ಕೃತಿಗಳು: ಮರದ ಮೇಲಿನ ಗಾಳಿ, ಹಾಡಕ್ಕಿ ಹಾಗೂ ಇತರ ಪದಗಳು, ಪ್ಯಾಂಥರ್ ...

READ MORE

Related Books