About the Author

ಶಾಶ್ವತಿ ಸಂಸ್ಥೆ ಸಂಸ್ಥಾಪಕಿ, ಕನ್ನಡದ ಮೊದಲ ಮಹಿಳಾ ಪತ್ರಕರ್ತೆ, ಸಾಹಿತಿ ಚಿ.ನ.ಮಂಗಳಾ ಈ ಅವರು ಶಿಕ್ಷಣ ತಜ್ಞರಾಗಿ, ಸ್ತ್ರೀವಾದಿ ಚಿಂತಕರಾಗಿ, ಬರಹಗಾರರಾಗಿ ಚಿರಪರಿಚಿತರಾಗಿದ್ದಾರೆ. 

ಇವರು ಬರೆದಿರುವ ಪ್ರಮುಖ ಕೃತಿಗಳೆಂದರೆ ರಾಜೇಶ್ವರಿ, ಅಭಾಗಿನಿ, ಕೆನಡಾ ಕವನಗಳು, ನಾಟಕ ಎಲ್ಲರೂ ನನ್ನವರೆ (ರೂಪಾಂತರ),  ಹೆಲನ್ ಕೆಲರ್, ತೋರುದತ್, ನೈಟಿಂಗೇಲ್, ತಿರುಮಲಾಂಬಾ, ಸ್ನೇಹಸಿಂಧು, ಭಾಷಾಂತರ, ಮಾರ್ಗದರ್ಶಿ, ಸ್ಟತಿ - ಸ್ಮರಣಗ್ರಂಥ, ನಮನ, ರತ್ನನ ಪದಗಳು, ತಿರುಮಲಾಂಬ - ಜೀವನ ಮತ್ತು ಸಾಧನೆ (ಸಹ-ಸಂಪಾದನೆ), ಕರ್ನಾಟಕದ ಮಹಿಳೆಯರು - ಲೇಖಕಿಯರು (ಮಾಹಿತಿ ಕೋಶ), ಫಾರ್ ಅಕ್ರಾಸ್ದಿ ಸೀಸ್ (ಪ್ರವಾಸ), ಸಾಯಿ ಸಬ್ಸೈನ್ (ಬಾಬಾ ಕುರಿತು), ಬಿಯಾಂಡ್ ದ ಷೋಲ್-ಇಂಡಿಯನ್ ಆನ್ ದಿ ಮೂವ್ (ಸಹ-ಸಂಪಾದನೆ), ದಿ ಈ ಹಾರ್ಪ್ ಜೇಮ್ಸ್ ಎಚ್. ಕಸಿನ್-ಎ ಸಡಿ ಮುಂತಾದವು. 

ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿನ ಇವರ ಕೊಡುಗೆಗೆ ಕರ್ನಾಟಕ ರಾಜ್ಯ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ರೋಟರಿ ಕ್ಲಬ್‌ನ ಪಾಲ್ ಹ್ಯಾರಿಸ್ ಫೆಲೋ, 'ಸಾಹಿತ್ಯಶ್ರೀ' ಬಿರುದು. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಇತ್ಯಾದಿ ಗೌರವಗಳು ಒಲಿದು ಬಂದಿವೆ. 

ಚಿ.ನ. ಮಂಗಳ

(10 Apr 1938-30 May 1997)