
ಆರ್. ಕೆ. ನಾರಾಯಣ್ ಭಾರತೀಯ ಇಂಗ್ಲಿಷ್ ಸಾಹಿತ್ಯದ ಅಗ್ರಗಣ್ಯ ಸಾಹಿತಿ. ಅವರ ’ವೇಟಿಂಗ್ ಫಾರ್ ಮಹಾತ್ಮ’ ಕೃತಿಯ ಕನ್ನಡ ಅನುವಾದ ಇದು.
ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸದಲ್ಲಿ ಅಭೂತಪೂರ್ವ ಇತಿಹಾಸ ಬರೆದ ಮಹಾತ್ಮ ಗಾಂಧೀಜಿ ಅವರ ವ್ಯಕ್ತಿತ್ವವನ್ನು ಪರಿಣಾಮಕಾರಿಯಾಗಿ ಚಿತ್ರಿಸಲಾಗಿದೆ. ಚಿ.ನ.ಮಂಗಳ ಅವರು ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ತಂದೆ ತಾಯಿಗಳಿಲ್ಲದೆ ಅಜ್ಜಿಯ ಪೋಷಣೆಯಲ್ಲಿ ಬೆಳೆದ ಶ್ರೀರಾಮ್ ಮಹಾತ್ಮರ ಬಳಿ ಸೇರಿಕೊಳ್ಳುತ್ತಾನೆ, ನಂತರ ಜೈಲಿಗೆ ಹೋಗುತ್ತಾನೆ. ದೇಶಕ್ಕೆ ಸ್ವಾತಂತ್ರ್ಯ ಬರುತ್ತದೆ. ಆ ಸಂತಸದ ಬೆನ್ನಿಗೆ ಗಾಂಧಿಹತ್ಯೆ ಕಾಡುತ್ತದೆ. ಆಗ ಶ್ರೀರಾಮ್ ತನ್ನ ಭಾವೀ ಪತ್ನಿಯ ಜೊತೆಯಲ್ಲಿದ್ದು ದುರಂತ ಕ್ಷಣಕ್ಕೆ ಸಾಕ್ಷಿಯಾಗುತ್ತಾನೆ.
ಎಂದಿನಂತೆ ದಟ್ಟ ವಿವರಗಳ ಮೂಲಕ ನಾರಾಯಣ್ ಅನನ್ಯ ರೀತಿಯಲ್ಲಿ ಕತೆ ಕಟ್ಟಿದ್ದಾರೆ.
©2025 Book Brahma Private Limited.