About the Author

ಲೇಖಕ ಚಿನ್ನಸ್ವಾಮಿ ಡಿ. ಡಿ. ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ಬ್ಯಾಡಮೂಡ್ಲು ಗ್ರಾಮದವರು. ತಾಯಿ ಗುರುಸಿದ್ದಮ್ಮ, ತಂದೆ ದೊಡ್ಡಸಿದ್ದಯ್ಯ. ಪ್ರಾಥಮಿಕ ಶಿಕ್ಷಣವನ್ನು ಬ್ಯಾಡಮೂಡ್ಲು, ಹಾಗೂ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಹರದನಹಳ್ಳಿಯಲ್ಲಿ,  ಪಿ.ಯು.ಸಿ. ಮತ್ತು ಪದವಿಯನ್ನು ಚಾಮರಾಜನಗರದಲ್ಲಿ, ಸ್ನಾತಕೋತ್ತರ ಹಾಗೂ ಎಂ.ಫಿಲ್. ಪದವಿಯನ್ನು ಮೈಸೂರು ವಿಶ್ವವಿದ್ಯಾನಿಲಯದಲ್ಲಿ, ಬಿ.ಇಡಿ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ,, ಭಾರತೀಯ ಭಾಷಾ ಸಂಸ್ಥಾನ, ಮೈಸೂರಿನಲ್ಲಿ, ತೆಲುಗು ಭಾಷೆ ಡಿಪ್ಲೋಮಾವನ್ನು ಪೂರೈಸಿರುತ್ತಾರೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ‘ಕನ್ನಡ ನಾಟಕಗಳಲ್ಲಿ ಬುದ್ಧ ಬಸವ ಅಂಬೇಡ್ಕರ್” ವಿಷಯವಾಗಿ ಸಂಶೋಧನಾ ವಿದ್ಯಾರ್ಥಿ. ಅವರ ಮೊದಲ ವಿಮರ್ಶೆ ಕೃತಿಯಾದ ‘ನೆಲದೊಡಲು'ನ್ನು ಹೊರತಂದಿದ್ದಾರೆ ಮಹಿಳಾ ಸಬಲೀಕರಣದಲ್ಲಿ ಅಂಬೇಡ್ಕರ್, ಒಳಗೊಳ್ಳುವ ಅಭಿವೃದ್ಧಿಗಾಗಿ ಮೀಸಲಾತಿ, ಅಂಬೇಡ್ಕರ್‍ರವರ ಆರ್ಥಿಕ ಚಿಂತನೆಗಳು ಎಂಬ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ.

ಕೃತಿಗಳು: ಅಂಕುಶವಿಲ್ಲದ ನಡೆ, ‘ನೆಲದೊಡಲು,  ಮಹಿಳಾ ಸಬಲೀಕರಣದಲ್ಲಿ ಅಂಬೇಡ್ಕರ್, ಒಳಗೊಳ್ಳುವ ಅಭಿವೃದ್ಧಿಗಾಗಿ ಮೀಸಲಾತಿ, ಅಂಬೇಡ್ಕರ್ ಅವರ ಆರ್ಥಿಕ ಚಿಂತನೆಗಳು (ಸಂಪಾದನೆ)

ಚಿನ್ನಸ್ವಾಮಿ ಡಿ