About the Author

ಯುವ ಲೇಖಕ ದರ್ಶನ್ ಜಯಣ್ಣ ಹುಟ್ಟೂರು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು (1985), ಆಡಿ ಬೆಳೆದದ್ದು ಶಾಲೆ ಕಲಿತದ್ದು ತುಮಕೂರು. ವೃತ್ತಿಯಿಂದ 'ಕೆಮಿಕಲ್ ಇಂಜಿನಿಯರ್', ಡಿಗ್ರಿ ಪಡೆದದ್ದು RVCE ಬೆಂಗಳೂರು (2006). ಮೊದಲಿಗೆ ಮಂಗಳೂರಿನ MCF ನಲ್ಲಿ ಪ್ರೊಡಕ್ಷನ್ ಇಂಜಿನಿಯರ್ ಆಗಿ ಕೆಲಸ ನಂತರ ಬೆಂಗಳೂರಿನ GE ಮತ್ತು SABIC ತಂತ್ರಜ್ಞಾನ ಕೇಂದ್ರಗಳಲ್ಲಿ ಸಂಶೋಧಕನಾಗಿ ಕೆಲಸ. ಕಳೆದ ಕೆಲವು ವರ್ಷಗಳಿಂದ ಸೌದಿಯ SABIC ಪೆಟ್ರೋಕೆಮಿಕಲ್ಸ್ ನಲ್ಲಿ 'ಹಿರಿಯ ವಿಜ್ಞಾನಿಯಾಗಿ' ಕಾರ್ಯ ನಿರ್ವಹಣೆ. ಮೊದಲ ಪ್ರಯತ್ನ "ಪದ್ಯ ಸಿಕ್ಕಿತು" ಎಂಬ ಕವನ ಸಂಕಲನ (2018). ವೈವಿಧ್ಯ ಓದು ಮತ್ತು ದೇಶ ಸುತ್ತುವುದು ಬದುಕಿನ ಒಂದು ಭಾಗ ಎಂಬುದು ಬಲವಾದ ನಂಬಿಕೆ. ಅರ್ಥಶಾಸ್ತ್ರ ಮತ್ತು ಇತಿಹಾಸ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ.

ದರ್ಶನ್ ಜಯಣ್ಣ