About the Author

ಬಾಗಲಕೋಟೆ ಜಿಲ್ಲೆಯ, ಬೋಡನಾಯಕದಿನ್ನಿ ಗ್ರಾಮದಲ್ಲಿ ಜನಿಸಿದ 'ದೇಹ' ಕಾವ್ಯನಾಮದಿಂದ ಬರೆಯುವ ಹನುಮಂತರಾವ ದೇಸಾಯಿ ಅವರು ಈಗಿನ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಕಲಬುರಗಿ, ಆಳಂದದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿ, ಕಲಬುರಗಿಯ ಸರಕಾರಿ ಪದವಿ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ, ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಿಂದ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, M.Phil ಹಾಗೂ ಡಾಕ್ಟರೇಟ ಪದವಿ ಪಡೆದರು. 

‘ದೇಹ’ ಅವರ ಇಂದಿನ ಪದವಿ ಮತ್ತು ಸದಸ್ಯತ್ವಗಳು M.Sc; MEE; M.Phil; PH.D; B'Ed; GFS; MEE; RQP; FMC. ಅಲ್ಟ್ರಾಟೆಕ್ ಸಿಮೆಂಟ ಕಂಪನಿಯಲ್ಲಿ ಭೂವಿಜ್ಞಾನಿಯಾಗಿ ಕಾರ್ಯಾರಂಭ ಮಾಡಿದ ‘ದೇಹ’ ಅವರು ಆನಂತರ ಜುವಾರಿ ಸಿಮೆಂಟನಲ್ಲಿ Asst. Manager ಆಗಿ, Intertek Clebbret ಎನ್ನುವ ಬಹುರಾಷ್ಟ್ರೀಯ ಕಂಪನಿಯಲ್ಲಿ Business Manager Minerals , ದಾಲ್ಮೀಯಾ ಸಿಮೆಂಟನಲ್ಲಿ Sr. General Manager, ಪ್ರಪಂಚದ ಪ್ರತಿಷ್ಟಿತ ಬಹುರಾಷ್ಟ್ರೀಯ ಕಂಪನಿ Rio Tinto ದಲ್ಲಿ Land Access Head, ಈಗ MSPL ಕಂಪನಿಯಲ್ಲಿ Vice President (Corporate Communications) ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

'ದೇಹ' ಸಾಕಷ್ಟು ವೃತ್ತಿರಂಗಭೂಮಿ, ಹವ್ಯಾಸಿ ರಂಗಭೂಮಿ ರೇಡಿಯೋಗಳಿಗೆ ನಾಟಕಗಳನ್ನು, ಕಥೆ, ಕವನ, ಲೇಖನಗಳನ್ನು ಬರೆದಿದ್ದಾರೆ. ‘ದೇವಭೂಮಿಯಲ್ಲೊಂದಷ್ಟು ದಿನ’ ಮತ್ತು ’ಸಂಧ್ಯಾರಾಗ’ ಅವರ ಪ್ರಕಾಶಿತ ಪ್ರವಾಸ ಕಥನ ಮತ್ತು ಕಾದಂಬರಿಗಳು. ಚಿನ್ನದ ಗೊಂಬೆ, ಸತಿ ಸಂಸಾರದ ಜ್ಯೋತಿ, ವೀರ ಸಿಂಧೂರ ಲಕ್ಷ್ಮಣ, ಗರುಡ ರಾಜ್ಯದಲ್ಲಿ ಘಟಸರ್ಪ, ದೀಪಾ, ನಮಸ್ಕಾರ, ಭಲೇ ಮಗಳೆ, ಮಂಗಳಾ ನನ್ನ ಅತ್ತಿಗೆ, ಸತ್ತವರ ಬದುಕು, ತಾಯಿ ಸತ್ತ ಮಗಳು, ಬದುಕು ಬಂಗಾರವಾಯ್ತು, ಇತ್ಯಾದಿ ವೃತ್ತಿರಂಗಭೂಮಿಯ ನಾಟಕಗಳು. ಜೈ ಸಿದ್ಧನಾಯಕ, ಖರೋಖರ, ಹರಕೆಯಕುರಿ ಇತ್ಯಾದಿ ಅವರು ಅಭಿನಯಿಸಿದ ಹವ್ಯಾಸಿ ರಂಗಭೂಮಿಯ ನಾಟಕಗಳು. ಆಕಾಶವಾಣಿ ಗುಲಬರ್ಗಾ ಕೇಂದ್ರ. ಆಕಾಶವಾಣಿಯ B High grade ಕಲಾವಿದರಾಗಿ, ಅರೆಕಾಲಿಕ ಉದ್ಘೋಷಕರಾಗಿ ಸೇವೆ ಸಲ್ಲಿಸಿದ್ದು, ಆಕಾಶವಾಣಿಗೆ ಸಾಕಷ್ಟು ರೇಡಿಯೋ ನಾಟಕಗಳನ್ನೂ ಬರೆದಿದ್ದಾರೆ. ಡಾ. ಕ್ಯಾಲ್ಕ್ಯೂಲೇಟರ್ ರಾವ, ಶುಭಮಸ್ತು, ಲೀಕೀ, ಕಲ್ಲರಳಿ ಕೊಡೆಯಾಗಿ ಸುಪ್ರಸಿದ್ಧ ನಾಟಕಗಳಲ್ಲಿ ಹಲವು. ಆಕರ್ಷಣೆ, ಗೂಡು ಸೇರಿದ ಹಕ್ಕಿ, ಸೌಹಾರ್ದ ಬದುಕು, ರೂಂ. ನಂ. ೨೯, ಒಂದು ಪ್ರೇಮ ಪ್ರಸಂಗ, ಬೆಲ್ಲದ ನಿದ್ದೆ, ಡ್ರೈವರ್, ಆಕಸ್ಮಿಕ ಕೊಲೆಗಳು ಹೀಗೆ ಹಲವು ಕಥೆಗಳು.

ಕೃತಿಗಳು :  ದೇವಭೂಮಿಯಲ್ಲೊಂದಷ್ಟು ದಿನ,  ಸಂಧ್ಯಾರಾಗ, ಆ ಲಾಕ್‌ʼಡೌನ್‌ ದಿನಗಳು , ಕೊಟ್ಟಾಯಿ ಕೆರೆ. 

 

ದೇಹ (ದೇಸಾಯಿ ಹನುಮಂತರಾವ)