ಆ ಲಾಕ್ ಡೌನ್ ದಿನಗಳು

Author : ದೇಹ (ದೇಸಾಯಿ ಹನುಮಂತರಾವ)

Pages 218

₹ 150.00
Year of Publication: 2020
Published by: ಭೂಮಿ ಪ್ರಕಾಶನ
Address: ಫ್ಲ್ಯಾಟ್ ಸಂಖ್ಯೆ 1051,ಪ್ರಿಸ್ಟೀಜ್  ಮಿಸ್ಟಿ ವಾಟರ್‍ಸ್ , ಕೆಂಪಾಪುರ, ಹೆಬ್ಬಾಳ, ಬೆಂಗಳೂರು
Phone: 7022049043

Synopsys

ಲೇಖಕ ದೇಹ (ದೇಸಾಯಿ ಹನುಮಂತ) ಅವರ ಕಾದಂಬರಿ -ಆ ಲಾಕ್ ಡೌನ್ ದಿನಗಳು. ಉನ್ನತ ಹುದ್ದೆಯಲ್ಲಿರುವ ಅನಿವಾಸಿ ಭಾರತೀಯನೊಬ್ಬ ಲಾಕ್ ಡೌನ್ ಸಂದರ್ಭದಲ್ಲಿ ಭಾರತಕ್ಕೆ ಬಂದಾಗ ಪಡುವ ಪಾಡು, ಕಲಿಯುವ ಪಾಠ, ದೇಶ, ಭಾಷೆ, ಸಂಸ್ಕೃತಿಯ ಬಗ್ಗೆ ಮೂಡುವ ಸ್ಥಿತಿಯನ್ನು ವಿವರಿಸುತ್ತದೆ. ಮಾತ್ರವಲ್ಲ; ಪಡೆಯುವ ಪ್ರೀತಿ, ಅಭಿಮಾನ ಅವನನ್ನು ತಾಯ್ನಾಡಿನಲ್ಲಿ ನೆಲೆ ನಿಲ್ಲುವಂತೆ ಮಾಡುವ ಕಥಾ ವಸ್ತು ಇಲ್ಲಿದೆ. ಕಥೆಯ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕೃತಿಯು ಓದುಗರ ಗಮನ ಸೆಳೆಯುತ್ತದೆ. 

 

 

About the Author

ದೇಹ (ದೇಸಾಯಿ ಹನುಮಂತರಾವ)

ಬಾಗಲಕೋಟೆ ಜಿಲ್ಲೆಯ, ಬೋಡನಾಯಕದಿನ್ನಿ ಗ್ರಾಮದಲ್ಲಿ ಜನಿಸಿದ 'ದೇಹ' ಕಾವ್ಯನಾಮದಿಂದ ಬರೆಯುವ ಹನುಮಂತರಾವ ದೇಸಾಯಿ ಅವರು ಈಗಿನ ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ನಂತರ ಕಲಬುರಗಿ, ಆಳಂದದಲ್ಲಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿ, ಕಲಬುರಗಿಯ ಸರಕಾರಿ ಪದವಿ ಕಾಲೇಜಿನಿಂದ ವಿಜ್ಞಾನದಲ್ಲಿ ಪದವಿ, ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಿಂದ ಭೂವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, M.Phil ಹಾಗೂ ಡಾಕ್ಟರೇಟ ಪದವಿ ಪಡೆದರು.  ‘ದೇಹ’ ಅವರ ಇಂದಿನ ಪದವಿ ಮತ್ತು ಸದಸ್ಯತ್ವಗಳು M.Sc; MEE; M.Phil; PH.D; B'Ed; GFS; MEE; RQP; FMC. ಅಲ್ಟ್ರಾಟೆಕ್ ಸಿಮೆಂಟ ...

READ MORE

Related Books