About the Author

ದೇವರಾಜು ಚನ್ನಸಂದ್ರರವರು ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಚನ್ನಸಂದ್ರ ಗ್ರಾಮದವರು. ತಂದೆ- ಈರೇಗೌಡ, ತಾಯಿ- ಮಹದೇವಮ್ಮ. ಪ್ರಾಥಮಿಕ ಶಿಕ್ಷಣವನ್ನು ತಮ್ಮ ಹುಟ್ಟೂರಿನಲ್ಲಿ ಪಡೆದ ದೇವರಾಜು ಅವರು ಪ್ರೌಢ ಶಿಕ್ಷಣವನ್ನು ಕೋಡಿಹಳ್ಳಿಯ ಶ್ರೀಶಾರದಾ ಹೈಸ್ಕೂಲ್ ನಲ್ಲಿ ಪಡೆದುಕೊಂಡರು. ಕಾಲೇಜು ಶಿಕ್ಷಣವನ್ನು ಕನಕಪುರದ ವಿದ್ಯಾದಾನಿ ಮತ್ತು ಕರ್ಮಯೋಗಿ ಶ್ರೀ ಎಸ್. ಕರಿಯಪ್ಪನವರ ರೂರಲ್ ಕಾಲೇಜಿನಲ್ಲಿ ಪೂರ್ಣಗೊಳಿಸಿದ ದೇವರಾಜು ಅವರು ಬೆಂಗಳೂರಿನ ವಿಶ್ವವಿದ್ಯಾಲಯದಲ್ಲಿ ಸಮಾಜಕಾರ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಲವಾರು ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸಿರುವ ದೇವರಾಜ್ ಆಪ್ತಸಮಾಲೋಚಕರಾಗಿ ಸುಮಾರು 5 ವರ್ಷ ಕಾರ್ಯ ನಿರ್ವಹಿಸಿ ಮತ್ತೈದು ವರ್ಷ ಜೀವನ ಕೌಶಲ್ಯ ತರಬೇತಿದಾರರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಹಿನ್ನೆಲೆಯಲ್ಲಿ ಜನನಿ ಟ್ರಸ್ಟ್ ಎಂಬ ಸ್ವಯಂ ಸೇವಾ ಸಂಸ್ಥೆಯನ್ನು ಆರಂಭಿಸಿ ಶಿಕ್ಷಣ ಮತ್ತು ಪರಿಸರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕಾರ್ಯೋನ್ಮುಖರಾಗಿದ್ದು, ವ್ಯಕ್ತಿತ್ವ ವಿಕಸನ ಮತ್ತು ಜೀವನ ಕೌಶಲ್ಯ ತರಬೇತಿಯನ್ನು ಹಲವಾರು ಸಂಸ್ಥೆಗಳಲ್ಲಿ ನೀಡುತ್ತಿದ್ದು, ಇದರೊಂದಿಗೆ ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಕೌಶಲ್ಯ ಕುರಿತಾದ ತರಬೇತಿಯನ್ನು ನೀಡುತ್ತಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಮಕ್ಕಳಿಗೆ ಸಹಕಾರಿಯಾಗಲೆಂದು ಜನನಿ ಟ್ರಸ್ಟ್ ಬೆಂಗಳೂರು ಎಂಬ ಯೂಟ್ಯೂಬ್ ಚಾನಲನ್ನು ಆರಂಭಿಸಿ ಅದರ ಮೂಲಕ ದಿನನಿತ್ಯ ಮಾಹಿತಿ ಒದಗಿಸುತ್ತಿದ್ದಾರೆ. ಸಮಾನ ಮನಸ್ಕರನ್ನೆಲ್ಲಾ ಒಟ್ಟುಗೂಡಿಸಿ ಜನನಿ ಜೀವನ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸಿದ್ದಾರೆ. ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಇವರು ಜನನಿ ಪಬ್ಲಿಕೇಷನ್ಸ್ ಮೂಲಕ ‘ನಮ್ಮೊಳಗೆ ನಾವಿಲ್ಲ’ , ‘ಸೋಲು ಸಾವಲ್ಲ ಗೆಲುವು ಸುಖವಲ್ಲ’, ‘ವಾಕಿಂಗ್ ವಿತ್ ವಿದ್ಯಾರ್ಥಿ’ ‘ಪೋಷಕರು ಬೋಧಕರಲ್ಲ ಸಾಧಕರು’ ಎಂಬ ಪುಸ್ತಕಗಳನ್ನು ಹೊರತಂದಿದ್ದಾರೆ.

ದೇವರಾಜು ಚನ್ನಸಂದ್ರ