About the Author

ಲೇಖಕ ದಿನೇಶ್ ಮಡಗಾಂವ್ಕರ್‌ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಧರರು. ಡಿಜಿಟಲ್ ಮೀಡಿಯಾ ಮಾರ್ಕೆಟಿಂಗ್‌ನಲ್ಲಿ ಪಿ.ಎಚ್‌ಡಿಗಾಗಿ ಪ್ರೌಢಪ್ರಬಂಧ ಸಲ್ಲಿಸಿದ್ದಾರೆ. ಉಷಾಕಿರಣ, ಜೀ ನೆಟ್‌ವರ್ಕ್, ಸಂಜೆ ಕರ್ನಾಟಕ, ಬಿ ಟಿವಿಯಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮಗಳ ಭಾಗವಾಗಿದ್ದಾರೆ.

ದಿಗಂತಾ ಮೀಡಿಯಾ ಸೊಲ್ಯೂಷನ್ಸ್ -ಸಂಸ್ಥೆಯ ಮೂಲಕ ಅನುವಾದ ಹಾಗೂ  ಅನೇಕ ಪ್ರಮುಖ ಜಾಹೀರಾತು ಸಂಸ್ಥೆಗಳಿಗೆ ಸ್ಥಳೀಯ ಭಾಷೆಯ ಜಾಹೀರಾತಿನ ಸ್ಕ್ರಿಪ್ಟ್ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ವಿವಿಧ ಸಂಸ್ಥೆಗಳಿಗೆ ಕಳೆದ 15 ವರ್ಷಗಳಿಂದ ಮುದ್ರಣ, ರೇಡಿಯೋ, ದೂರದರ್ಶನ ಜಾಹೀರಾತು ಬರೆಯುತ್ತಿದ್ದಾರೆ. ಒಂದು ಸಿನೆಮಾ ಹಾಗೂ ಧಾರಾವಾಹಿಗೆ ಗ್ರೀನ್ ಪ್ಲೇ ಹಾಗೂ ಸಂಭಾಷಣೆಯನ್ನು ಬರೆಯುತ್ತಾರೆ. `ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು...' ಅವರ ಮೊದಲ ಕಥಾ ಸಂಕಲನ.

ದಿನೇಶ್ ಮಡಗಾಂವ್ಕರ್‌