ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು

Author : ದಿನೇಶ್ ಮಡಗಾಂವ್ಕರ್‌

Pages 80

₹ 80.00
Year of Publication: 2020
Published by: ಸಂಗಾತ ಪುಸ್ತಕ
Address: ರಾಜೂರ ಅಂಚೆ, ಗಜೇಂದ್ರಗಡ ತಾಲ್ಲೂಕು, ಗದಗ ಜಿಲ್ಲೆ
Phone: 9341757653

Synopsys

‘ಗೆಂಡೆಹಳ್ಳಿ ರಾಮ ವನವಾಸಕ್ಕೆ ಹೋಗಿದ್ದು...’ - ಎಂಟು ಕತಾಗುಚ್ಛಗಳನ್ನು ಒಳಗೊಂಡಿದ್ದು ಕಥೆಗಳು ಬೆಳೆದು, ಕೊನೆಯಲ್ಲಿ ಒಂದು ಅನಿರೀಕ್ಷಿತ ತಿರುವನ್ನು ಪಡೆದು ನಿಂತು ಬಿಡುತ್ತವೆ. ಕೃತಿಗೆ ಮುನ್ನುಡಿ ಬರೆದಿರುವ ಎಂ. ಎಸ್‌. ಶ್ರೀರಾಮ್ ಅವರು “ದಿನೇಶ್ ಕಥೆಗಳಲ್ಲಿ ಸೌಹಾರ್ದಪೂರ್ಣ ಸಮ-ಸಮಾಜವನ್ನು ಕಟ್ಟುವ ಯುವ ಆಶಾವಾದವಿದೆ. ಈ ಹಿನ್ನೆಲೆಯಲ್ಲಿ ಅವರ ನಾಲ್ಕು ಕಥೆಗಳನ್ನು ನಾವು ಗಮನಿಸಬೇಕು. “ಅಮ್ಮ ಎಲ್ಲಿದ್ದಾಳೆ?”, “ಗೆಂಡೆಹಳ್ಳಿ ರಾಮ...” ಹಿಂದು-ಮುಸ್ಲಿಂ ಸೌಹಾರ್ದವನ್ನು ಸೂಚ್ಯವಾಗಿ ಹೇಳುತ್ತವೆ. “ಶುದ್ಧಿ” ಕಥೆಯಲ್ಲಿ ಕಾವ್ಯನ್ಯಾಯವೂ ಸಂಪ್ರದಾಯವನ್ನು ಮುರಿದು ಮತ್ತೊಂದು ರೀತಿಯ ಸಮಾಜವನ್ನು ಕಾಣುವ ತುಡಿತ ಕಾಣಿಸುತ್ತದೆ” ಎಂದು ವಿಶ್ಲೇಷಿಸಿದ್ದು ವಸ್ತುನಿಷ್ಟವಾಗಿದೆ.

About the Author

ದಿನೇಶ್ ಮಡಗಾಂವ್ಕರ್‌

ಲೇಖಕ ದಿನೇಶ್ ಮಡಗಾಂವ್ಕರ್‌ ಅವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿಧರರು. ಡಿಜಿಟಲ್ ಮೀಡಿಯಾ ಮಾರ್ಕೆಟಿಂಗ್‌ನಲ್ಲಿ ಪಿ.ಎಚ್‌ಡಿಗಾಗಿ ಪ್ರೌಢಪ್ರಬಂಧ ಸಲ್ಲಿಸಿದ್ದಾರೆ. ಉಷಾಕಿರಣ, ಜೀ ನೆಟ್‌ವರ್ಕ್, ಸಂಜೆ ಕರ್ನಾಟಕ, ಬಿ ಟಿವಿಯಲ್ಲಿ ಕೆಲಕಾಲ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದ ಅನುವಾದ ಉಪಕ್ರಮಗಳ ಭಾಗವಾಗಿದ್ದಾರೆ. ದಿಗಂತಾ ಮೀಡಿಯಾ ಸೊಲ್ಯೂಷನ್ಸ್ -ಸಂಸ್ಥೆಯ ಮೂಲಕ ಅನುವಾದ ಹಾಗೂ  ಅನೇಕ ಪ್ರಮುಖ ಜಾಹೀರಾತು ಸಂಸ್ಥೆಗಳಿಗೆ ಸ್ಥಳೀಯ ಭಾಷೆಯ ಜಾಹೀರಾತಿನ ಸ್ಕ್ರಿಪ್ಟ್ ಬರವಣಿಗೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ವಿವಿಧ ಸಂಸ್ಥೆಗಳಿಗೆ ಕಳೆದ ...

READ MORE

Related Books