About the Author

ದಿವ್ಯಾ ಕಾರಂತ ಅವರು ಮಲೆನಾಡು ವ್ಯಾಪ್ತಿಯ ಬಸರಿಕಟ್ಟೆ ಗ್ರಾಮದವರು. ಅಲ್ಲಿಯೇ, ಸೀಕ್ರೆಡ್ ಹಾರ್ಟ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಶ್ರೀ ಸದ್ಗುರು ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ ಪೂರೈಸಿ, ಉಡುಪಿಯ ಮಹಾತ್ಮಗಾಂಧಿ ಪ.ಪೂ. ಕಾಲೇಜಿನಲ್ಲಿ ಪಿಯುಸಿ, ಮಹಾತ್ಮಗಾಂಧಿ ಮೆಮೆರಿಯಲ್ ಕಾಲೇಜಿನಲ್ಲಿ ಬಿ.ಕಾಂ., ಮಣಿಪಾಲ್ ನ ಮಣಿಪಾಲ್ ಇಸ್ಟಿಟ್ಯೂಟ್ ಆಫ್ ಕಂಪ್ಯೂಟರ್‍ಸ್ ನಲ್ಲಿ ಕಂಪ್ಯೂಟರ್‍ಸ್ ಅಪ್ಲಿಕೇಷನ್ಸ್ ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ದೆಹಲಿಯ ನೊಯ್ಡಾದಲ್ಲಿ ಸಂವಹನ ಕೌಶಲಗಳಲ್ಲಿ ತರಬೇತಿ ಪಡೆದರು. ಬೆಂಗಳೂರು ವಿ.ವಿ.ಯಿಂದ ಇಂಗ್ಲಿಷ್ ನಲ್ಲಿ ಎಂ.ಎ. ಪಡೆದರು. ಕಲೆ ಮತ್ತು ಸಾಂಸ್ಕೃತಿಕ ವಿಕಾಸಕ್ಕಾಗಿ ಅಜ್ಞಾ ಪ್ರತಿಷ್ಠಾನ ಸಂಸ್ಥಾಪಕಿ, ಸರ್ವಂ ಥಿಯೇಟರ್ ಟ್ರಸ್ಟ್ ಸಂಸ್ಥಾಪಕಿ, ಕರ್ನಾಟಕ ಚಿತ್ರಕಲಾ ಅಕಾಡೆಮಿಯ ಕಾರ್ಯದರ್ಶಿ, ‘ದಿ ವೈಸೆಸ್ ಬಿಹ್ಯಾಂಡ್ ಇಂದಿರಾ’ , ಮೈ ವೈಫ್ ಮಿಸ್ ಗಾಂಧಿ ಹೀಗೆ ವಿವಿಧ ಸಾಕ್ಷ್ಯಚಿತ್ರಗಳನ್ನು ಬರೆದು ನಿರ್ದೇಶಿಸಿದ್ದಾರೆ. ಸಿನಿಮಾ ನಟಿ, ನಿರ್ದೇಶಕರು, ನೃತ್ಯಗಾರ್ತಿ, ವಿಮರ್ಶಕರು, ಧ್ವನಿದಾನಿಗಳು, ಯೋಗ ಶಿಕ್ಷಣ ತರಬೇತುದಾರರು ಆಗಿದ್ದಾರೆ. ನಮ್ಮೊಳಗೊಬ್ಬ ನಾಜೂಕಯ್ಯ ನಾಟಕ ಸೇರಿದಂತೆ ಹತ್ತು ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅಮೆರಿಕನ್ ಕನ್ನಡ ರೇಡಿಯೋ ಚಾನಲ್ ‘ರೇಡಿಯೋ ತರಂಗದಲ್ಲಿ ಆರ್.ಜೆ. ಆಗಿ ಪ್ರಸಿದ್ಧಿ ಪಡೆದಿದ್ದಾರೆ. RED FM 93.5 ಬೆಂಗಳೂರಿನಲ್ಲಿ ರೆಡಿಯೋ ಜಾಕಿ ಆಗಿ ಸೇವೆ ಸಲ್ಲಿಸಿದ್ದಾರೆ.

ಕೃತಿಗಳು: ಮಿಂಚು ಮತ್ತು ಮಳೆ ((ಸಣ್ಣ ಕಥೆಗಳ ಸಂಕಲನ), ಇವರ ‘ವಿಜಯಲಕ್ಷ್ಮಿ ಜಡೆ’ ಕೃತಿಯು ಮುಂಬೈ ನಲ್ಲಿ ಸಣ್ಣ ಕಥೆಗಳ ಹಬ್ಬದಲ್ಲಿ ಬಹುಮಾನ ಗಳಿಸಿದೆ.

ದಿವ್ಯಾ ಕಾರಂತ