ಮಿಂಚು ಮತ್ತು ಮಳೆ

Author : ದಿವ್ಯಾ ಕಾರಂತ

Pages 108

₹ 120.00
Year of Publication: 2021
Published by: ದಿವ್ಯಾ ಕಾರಂತ
Address: ಪ್ರಕಾಶಕರು,  # 2, 2ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ, ಗುರುರಾಜ್ ಬಡಾವಣೆ, 3ನೇ ಹಂತ ಬೆಂಗಳೂರು-560085

Synopsys

ಲೇಖಕಿ ದಿವ್ಯಾ ಕಾರಂತ್ ಅವರ ಸಣ್ಣ ಕಥೆಗಳ ಸಂಕಲನ-ಮಿಂಚು ಮತ್ತು ಮಳೆ. ಲೇಖಕಿಯ ಮೊದಲ ಕಥಾ ಸಂಕಲನವಿದು. ಕಾಥಾ ವಸ್ತುವಿನಲ್ಲಿ ವೈವಿಧ್ಯತೆ ಇದೆ. ನಿರೂಪಣಾ ಶೈಲಿಯು ಆಕರ್ಷಕವಾಗಿದೆ. ಸನ್ನಿವೇಶಗಳ ಜೋಡಣೆಯಲ್ಲಿ ಕಲಾತ್ಮಕತೆ ಇದೆ. ಪಾತ್ರಗಳ ಸೃಷ್ಟಿಯಲ್ಲಿ ಎಚ್ಚರವಹಿಸಲಾಗಿದೆ.ಅರ್ಥವತ್ತಾದ ಸಂಭಾಷಣೆಯು ಕಥೆಗಳ ಪರಿಣಾಮಕತೆಯನ್ನು ಹೆಚ್ಚಿಸಿದ್ದು, ಸಾಹಿತ್ಯಕವಾದ ಇಂತಹ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ. 

About the Author

ದಿವ್ಯಾ ಕಾರಂತ

ದಿವ್ಯಾ ಕಾರಂತ ಅವರು ಮಲೆನಾಡು ವ್ಯಾಪ್ತಿಯ ಬಸರಿಕಟ್ಟೆ ಗ್ರಾಮದವರು. ಅಲ್ಲಿಯೇ, ಸೀಕ್ರೆಡ್ ಹಾರ್ಟ್ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಶ್ರೀ ಸದ್ಗುರು ಹೈಸ್ಕೂಲ್ ನಲ್ಲಿ ಪ್ರೌಢಶಿಕ್ಷಣ ಪೂರೈಸಿ, ಉಡುಪಿಯ ಮಹಾತ್ಮಗಾಂಧಿ ಪ.ಪೂ. ಕಾಲೇಜಿನಲ್ಲಿ ಪಿಯುಸಿ, ಮಹಾತ್ಮಗಾಂಧಿ ಮೆಮೆರಿಯಲ್ ಕಾಲೇಜಿನಲ್ಲಿ ಬಿ.ಕಾಂ., ಮಣಿಪಾಲ್ ನ ಮಣಿಪಾಲ್ ಇಸ್ಟಿಟ್ಯೂಟ್ ಆಫ್ ಕಂಪ್ಯೂಟರ್‍ಸ್ ನಲ್ಲಿ ಕಂಪ್ಯೂಟರ್‍ಸ್ ಅಪ್ಲಿಕೇಷನ್ಸ್ ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ, ದೆಹಲಿಯ ನೊಯ್ಡಾದಲ್ಲಿ ಸಂವಹನ ಕೌಶಲಗಳಲ್ಲಿ ತರಬೇತಿ ಪಡೆದರು. ಬೆಂಗಳೂರು ವಿ.ವಿ.ಯಿಂದ ಇಂಗ್ಲಿಷ್ ನಲ್ಲಿ ಎಂ.ಎ. ಪಡೆದರು. ಕಲೆ ಮತ್ತು ಸಾಂಸ್ಕೃತಿಕ ವಿಕಾಸಕ್ಕಾಗಿ ಅಜ್ಞಾ ಪ್ರತಿಷ್ಠಾನ ಸಂಸ್ಥಾಪಕಿ, ಸರ್ವಂ ಥಿಯೇಟರ್ ಟ್ರಸ್ಟ್ ಸಂಸ್ಥಾಪಕಿ, ಕರ್ನಾಟಕ ಚಿತ್ರಕಲಾ ...

READ MORE

Related Books