About the Author

ವೃತ್ತಿಯಲ್ಲಿ ವೈದ್ಯರಾದ ಲೀಲಾವತಿ ದೇವದಾಸ್‌ ಅವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಬರಹಗಳ ಮೂಲಕವೇ ಕನ್ನಡಿಗರಿಗೆ ಪರಿಚಿತರಾಗಿರುವ ಇವರು ಜನಿಸಿದ್ದು 1930 ಮಾರ್ಚ್‌ 30ರಂದು. ವೈದ್ಯಕೀಯ ಶಿಕ್ಷಣದ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಅವರ ಪ್ರಮುಖ ಕೃತಿಗಳೆಂದರೆ ಸ್ತ್ರೀ ಸಂಜೀವಿನಿ, ಸ್ತ್ರೀ ಆರೋಗ್ಯ ಸಂರಕ್ಷಣೆ ಹೇಗೆ?, ಹೆರಿಗೆ, ಹೆಣ್ಣೇ ನಿನ್ನ ಆರೋಗ್ಯ ಕಾಪಾಡಿಕೊ, ಗರ್ಭಕೋಶದ ಕ್ಯಾನ್ಸರ್‌ ಅನ್ನು ದೂರವಿರಿಸಿ, ನಾನು ಗೌರಿಯ ಗರ್ಭಕೋಶ (ವೈದ್ಯಕೀಯ ಕೃತಿಗಳು), ಆಸ್ಪತ್ರೆಯಲ್ಲಿ ಹಾಸ್ಯ, ಮುಸುಕಿನ ಗುಡದ್ದು, ಕನ್ನಡ ವೈದ್ಯ ವಿಶ್ವಕೋಶ, ಬೈಬಲ್ಲಿನ ಅನಾಮಿಕ ಸ್ತ್ರೀಯರು ಮುಂತಾದವು. 

ಇವರಿಗೆ ಅತ್ತಿಮಬ್ಬೆ ಪ್ರಶಸ್ತಿ, ಸದೋದಿತಾ ಪ್ರಶಸ್ತಿ, ಜಾನ್‌ಹ್ಯಾಂಡ್ಸ್‌ ಪ್ರಶಸ್ತಿ, ಸರ್‌.ಎಂ.ವಿಶ್ವೇಶ್ವರಯ್ಯ ನವರತ್ನ ಪ್ರಶಸ್ತಿ, ರಾಜ್ಯ ಆರೋಗ್ಯ ಇಲಾಖೆಯ ಪ್ರಶಸ್ತಿ ಮುಂತಾದವು ಲಭಿಸಿವೆ..

ಲೀಲಾವತಿ ದೇವದಾಸ್‍

(30 Mar 1930)