ಸಿರಿಧಾನ್ಯ ಆರೈಕೆ

Author : ಲೀಲಾವತಿ ದೇವದಾಸ್‍

₹ 70.00




Published by: ಅಮೂಲ್ಯ ಪ್ರಕಾಶನ
Address: ಅಮೂಲ್ಯ ಪ್ರಕಾಶನ, ಬೆಂಗಳೂರು
Phone: 9448676770

Synopsys

ಸಿರಿಧಾನ್ಯಗಳ ಕುರಿತಾದಂತಹ ಮಾಹಿತಿ ಎಲ್ಲರಿಗೂ ತಿಳಿದಿಲ್ಲ. ಸಿರಿಧಾನ್ಯಗಳಿಂದ ನಮಗೆ ಎಷ್ಟು ಉಪಯೋಗ ಇದೆ ಎನ್ನುವುದರ ಕುರಿತು ಈವರೆಗೆ ಹಲವು ಪುಸ್ತಕಗಳು ಬರೆಯಲ್ಪಟ್ಟಿವೆ. ಸಿರಿಧಾನ್ಯಗಳನ್ನು ಉಪಯೋಗಿಸಿ ಅವುಗಳಿಂದ ಕಂಡುಕೊಂಡ ಉಪಯೋಗಗಳ ಕುರಿತು ಬರೆದಂತಹ ಪುಸ್ತಕಗಳು ಕೂಡ ಇವೆ. ಲೀಲಾವತಿ ಅವರು ಬರೆದ ಪುಸ್ತಕ ಈ ಸಂಧರ್ಭದಲ್ಲಿ ಏಕೆ ಮುಖ್ಯವಾಗುತ್ತೆ ಎಂದರೆ, ಅವರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ, ವಿವಿಧ ರಂಗಗಳಲ್ಲಿ ಗುರುತಿಸಿಕೊಂಡ ಸಿರಿಧಾನ್ಯ ತಜ್ಞರು. ಹಿಂದಿನ ಎಲ್ಲಾ ಪುಸ್ತಕಗಳಲ್ಲಿರುವ ಮಾಹಿತಿಗಳಿಗೆ ಬೆನ್ನೆಲುಬಾಗಿರುವಂತೆ ಇವೆ ಈ ಪುಸ್ತಕದಲ್ಲಿನ ಮಾಹಿತಿಗಳು. ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚಿರುವುದರಿಂದ ಮತ್ತು ಅದರ ಸೇವನೆಯಿಂದ ಮನುಷ್ಯರಿಗೆ ಬೇಗನೆ ಹಸಿವಾಗುವುದಿಲ್ಲ ಆದರೆ, ದೇಹಕ್ಕೆ ಸಮರ್ಪಕವಾದ ಶಕ್ತಿಯನ್ನು ಈ ಸಿರಿಧಾನ್ಯಗಳು ನೀಡುತ್ತವೆ. ರೋಗಗಳನ್ನು ನಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿಡಲು ಈ ಪುಸ್ತಕದಲ್ಲಿನ ಉಪಯುಕ್ತ ಮಾಹಿತಿಗಳು ಬಹಳಷ್ಟು ಸಹಕಾರಿಯಾಗಿವೆ. ಈ ಪುಸ್ತಕದಲ್ಲಿ ಕೇವಲ ಸಿರಿಧಾನ್ಯಗಳ ಮಾಹಿತಿ ಮಾತ್ರವಲ್ಲದೇ, ಅವುಗಳ ಬಗೆ ಬಗೆಯ ಅಡುಗೆಯ ವಿಧಾನಗಳ ಕುರಿತಾಗಿ ಹಲವು ಉಪಯುಕ್ತ ಬರಹಗಳಿವೆ. ರುಚಿಯ ಜೊತೆ ಜೊತೆಗೆ ದೇಹದ ಆರೋಗ್ಯವನ್ನು ಕಾಪಾಡಲು ಕೂಡ ಈ ಪುಸ್ತಕ ಸಾಕಷ್ಟು ಮಾಹಿತಿ ನೀಡುತ್ತದೆ.

About the Author

ಲೀಲಾವತಿ ದೇವದಾಸ್‍
(30 March 1930)

ವೃತ್ತಿಯಲ್ಲಿ ವೈದ್ಯರಾದ ಲೀಲಾವತಿ ದೇವದಾಸ್‌ ಅವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡವರು. ಬರಹಗಳ ಮೂಲಕವೇ ಕನ್ನಡಿಗರಿಗೆ ಪರಿಚಿತರಾಗಿರುವ ಇವರು ಜನಿಸಿದ್ದು 1930 ಮಾರ್ಚ್‌ 30ರಂದು. ವೈದ್ಯಕೀಯ ಶಿಕ್ಷಣದ ಜೊತೆಗೆ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅವರ ಪ್ರಮುಖ ಕೃತಿಗಳೆಂದರೆ ಸ್ತ್ರೀ ಸಂಜೀವಿನಿ, ಸ್ತ್ರೀ ಆರೋಗ್ಯ ಸಂರಕ್ಷಣೆ ಹೇಗೆ?, ಹೆರಿಗೆ, ಹೆಣ್ಣೇ ನಿನ್ನ ಆರೋಗ್ಯ ಕಾಪಾಡಿಕೊ, ಗರ್ಭಕೋಶದ ಕ್ಯಾನ್ಸರ್‌ ಅನ್ನು ದೂರವಿರಿಸಿ, ನಾನು ಗೌರಿಯ ಗರ್ಭಕೋಶ (ವೈದ್ಯಕೀಯ ಕೃತಿಗಳು), ಆಸ್ಪತ್ರೆಯಲ್ಲಿ ಹಾಸ್ಯ, ಮುಸುಕಿನ ಗುಡದ್ದು, ಕನ್ನಡ ವೈದ್ಯ ವಿಶ್ವಕೋಶ, ಬೈಬಲ್ಲಿನ ಅನಾಮಿಕ ಸ್ತ್ರೀಯರು ಮುಂತಾದವು.  ಇವರಿಗೆ ಅತ್ತಿಮಬ್ಬೆ ...

READ MORE

Related Books