About the Author

ಲೇಖಕ ಈರಯ್ಯ ಹಂಪಾಪುರ ಅವರು ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರ ಹೋಬಳಿಯ ಗಂಗೂರು ಅಂಚೆಯ ಹಂಪಾಪುರ ಗ್ರಾಮದವರು. ಎಂ.ಎ, ಬಿ.ಇಡಿ ಹಾಗೂ ಪಿಎಚ್ ಡಿ ಪದವೀಧರರು. ‘ತರಾಸು ಅವರ ಸಾಮಾಜಿಕ ಕಾದಂಬರಿಗಳಲ್ಲಿ ಸ್ತ್ರೀಯರ ಚಿತ್ರಣ: ಒಂದು ಅಧ್ಯಯನ’ ವಿಷಯದಲ್ಲಿ ಮಹಾ ಪ್ರಬಂಧ ಮಂಡನೆ. ಬೆಂಗಳೂರಿನ ಲಾಲ್ ಬಾಗ್ ಬಳಿಯ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಕೃತಿಗಳು: ಸಾಹಿತ್ಯ ಸಂವೇದನೆ (ವಿಮರ್ಶಾ ಲೇಖನಗಳು)  ಸ್ತ್ರೀ ಸಂವೇದನಾತ್ಮಕ ನೆಲೆಗಳು (ತರಾಸು ಸಾಮಾಜಿಕ ಕಾದಂಬರಿಗಳು) ಸಾಹಿತ್ಯದ ಓದು (ಸಂಪಾದನೆ) ವಿವಿಧೆಡೆ ಉಪನ್ಯಾಸಗಳನ್ನು ಮಂಡಿಸಿದ್ದು, ಸಂಶೋಧನಾತ್ಮಕ ಲೇಖನಗಳು ಪ್ರಕಟವಾಗಿವೆ. 

ಈರಯ್ಯ ಹಂಪಾಪುರ