About the Author

ಮೂಲತಃ ಚಿತ್ರದುರ್ಗದ ಬೇಡರ ಶಿವನಕೆರೆಯವರಾದ ಜ್ಯೋತಿಲಿಂಗಪ್ಪ ಅವರು 15-11-1950ರಂದು ಜನಿಸಿದರು. ತಂದೆ- ಹನುಮಂತಪ್ಪ ಎಸ್.ಜಿ., ತಾಯಿ- ಕಲ್ಲಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಫ್ರೌಢಶಿಕ್ಷಣವನ್ನು ಸಿರಿಗೆರೆಯಲ್ಲಿ, ಬಿ.ಎಸ್ಸಿ ಪದವಿಯನ್ನು ಬೆಂಗೂರಿನಲ್ಲಿ ಪೂರೈಸಿದ್ದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ ಹಾಗೂ ಹಿಮಾಚಲ ಪ್ರದೇಶದ ಶೀಮ್ಲಾದಲ್ಲಿ ಎಂ.ಎಡ್, ಜೊತೆಗೆ ಮೈಸೂರಿನಲ್ಲಿ ಡಿಪ್ಲೊಮಾ ಇನ್ ತಮಿಳು ಪದವಿಗಳನ್ನು ಪಡೆದಿದ್ದಾರೆ. ಆನಂತರ ಭದ್ರಾವತಿಯ ಅಗರದಳ್ಳಿಯಲ್ಲಿ ಫ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು 1997ರಿಂದ 2010ರವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಗರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಫೋಟೋಗ್ರಾಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ಸಾಗರ ಫೋಟೋಗ್ರಫಿ ಕ್ಲಬ್ಬಿನ ಸ್ಥಾಪಕ ಸದಸ್ಯರೂ ಆಗಿದ್ದಾರೆ.  ಕನ್ನಡ ಸಾಹಿತ್ಯಲೋಕದಲ್ಲಿ ತಮ್ಮದೇ ಛಾಪು ಮೂಡಿಸಿರುವ ಜ್ಯೋತಿ ಲಿಂಗಪ್ಪನವರು ಅಕ್ಕ, ಕೆಚ್ಚಲು ಮೋಡಗಳು, ನೀರಹೆಜ್ಜೆ, ನೀರ ನೆಳಲು, ಬಯಲ ನೆರಳು, ಬಿಸಿಲಹನಿ, ಆ ದಡ, ಇದ್ದ ಹಾಗೇ, ಅವಾಲಂಗ್ ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಸದ್ಯ ಸಾಗರದಲ್ಲಿ ವಾಸಿಸುತ್ತಿದ್ದಾರೆ. 

ಜಿ.ಹೆಚ್‍. ಜ್ಯೋತಿಲಿಂಗಪ್ಪ ಶಿವನಕೆರೆ

(15 Nov 1950)