ನೀರ ನೆರಳು

Author : ಜಿ.ಹೆಚ್‍. ಜ್ಯೋತಿಲಿಂಗಪ್ಪ ಶಿವನಕೆರೆ

Pages 124

₹ 120.00
Year of Publication: 2017
Published by: ನೇಕಾರ ಪ್ರಕಾಶನ
Address: ಗುರುಮಂದಿರ ರಸ್ತೆ, ಸೊರಬ – 577429, ಶಿವಮೊಗ್ಗ ಜಿಲ್ಲೆ
Phone: 9141833556

Synopsys

ನೀರ ನೆರಳು ಜ್ಯೋತಿಲಿಂಗಪ್ಪ ಶಿವನಕೆರೆ ಅವರ ಕವನ ಸಂಕಲನ. ಇಲ್ಲಿರುವ ಅನೇಕ ಕವಿತೆಗಳು ಅಲ್ಲಮಪ್ರಭು, ಖಲೀಲ್ ಗಿಬ್ರಾನ್ ಮತ್ತು ಸೂಪಿ ಕವಿಗಳ ರಚನೆಯನ್ನು ನೆನಪು ಮಾಡಿಕೊಡುತ್ತವೆ. ಕ್ಷಣ ಕ್ಷಣಕ್ಕೂ ಕುತೂಹಲ, ಮೆಚ್ಚುಗೆ ಉಂಟು ಮಾಡುವಂತಹ ಕವನ ಸಂಕಲನ ನೀರ ಹೆಜ್ಜೆ. ಕನ್ನಡ ಕವನ ಪ್ರಪಂಚದ ಪ್ರಮುಖ ಧಾರೆಯ ಪರಿಚಯದೊಂದಿಗೆ ಬರೆಯಲ್ಪಟ್ಟಿರುವ ಈ ಪುಸ್ತಕವು, ಓದುಗರ ನೆನಪಿನಲ್ಲಿ ಅಚ್ಚಳಿಯದೇ ಉಳಿದು ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸುತ್ತಮುತ್ತಲು ನಡೆಯುವ ವಿದ್ಯಾಮಾನಗಳನ್ನು, ಎಲ್ಲರೂ ಗಮನಿಸುತ್ತಾರೆ. ಆದರೆ ಅಂತರಂಗದ ಅಲೆಗಳ ಮುಖಾಂತರ ಅವುಗಳನ್ನು ಭಾವನಾತ್ಮಕವಾಗಿ ಗ್ರಹಿಸುವ ಕಲೆ ಎಲ್ಲರಿಗೂ ಸಿದ್ದಿಸುವುದಿಲ್ಲ. ಅಂತಹ ಗ್ರಹಿಕೆಯ ಫಲಿತಾಂಶವನ್ನು ಈ ಪುಸ್ತಕದಲ್ಲಿ ಓದುಗರು ಕಾಣಬಹುದು. ಈ ಸಂಕಲನದ ಬಹುಪಾಲು ರಚನೆಗಳು ವಚನ ಸಾಹಿತ್ಯ ಸ್ವರೂಪದ ಮುಕ್ತ ಬಯಲಿನಲ್ಲಿ ಮೂಡುವ ಗುರುತುಗಳಂತೆ ಕಾಣುತ್ತವೆ. ಇವುಗಳು ಕವಿತೆಯೆಂದು ಕಂಡರೆ ಕವಿತೆಗಳು, ವಚನಗಳೆಂದರೆ ವಚನಗಳು. ಇಂತಹ ವಿಶೇಷವಾದ ಗುಣ ವೈಶಿಷ್ಟ್ಯವನ್ನು ಹೊಂದಿರುವ ಪುಸ್ತಕವೆಂದರೆ ನೀರ ಹೆಜ್ಜೆ. ಉರಿಯುವ ದೀಪ ಬಯಿಸದು ಆಸೆ ಕತ್ತಲಲಿ ಮಿನುಗಿ ಬೆತ್ತಲಾಗುವುದು ಬಯಲು ಕೂಡಿ ಬಯಲೊಳು ಬಯಲು ನೆರಳಾಗುವುದು ನೆರಳಿಲ್ಲದ ಬಯಲು ಕೂಡಿ ಕೂಡದ ಬಯಲು ಕೂಡದ ಆಸೆ ದೀಪ ಎಂಬ ಕವಿತೆಯು ಜೀವನದ ವೈರುಧ್ಯಗಳ ಕುರಿತಾದ ಸೂಕ್ಷ್ಮಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ.

About the Author

ಜಿ.ಹೆಚ್‍. ಜ್ಯೋತಿಲಿಂಗಪ್ಪ ಶಿವನಕೆರೆ
(15 November 1950)

ಮೂಲತಃ ಚಿತ್ರದುರ್ಗದ ಬೇಡರ ಶಿವನಕೆರೆಯವರಾದ ಜ್ಯೋತಿಲಿಂಗಪ್ಪ ಅವರು 15-11-1950ರಂದು ಜನಿಸಿದರು. ತಂದೆ- ಹನುಮಂತಪ್ಪ ಎಸ್.ಜಿ., ತಾಯಿ- ಕಲ್ಲಮ್ಮ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲಿ, ಫ್ರೌಢಶಿಕ್ಷಣವನ್ನು ಸಿರಿಗೆರೆಯಲ್ಲಿ, ಬಿ.ಎಸ್ಸಿ ಪದವಿಯನ್ನು ಬೆಂಗೂರಿನಲ್ಲಿ ಪೂರೈಸಿದ್ದು, ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ ಹಾಗೂ ಹಿಮಾಚಲ ಪ್ರದೇಶದ ಶೀಮ್ಲಾದಲ್ಲಿ ಎಂ.ಎಡ್, ಜೊತೆಗೆ ಮೈಸೂರಿನಲ್ಲಿ ಡಿಪ್ಲೊಮಾ ಇನ್ ತಮಿಳು ಪದವಿಗಳನ್ನು ಪಡೆದಿದ್ದಾರೆ. ಆನಂತರ ಭದ್ರಾವತಿಯ ಅಗರದಳ್ಳಿಯಲ್ಲಿ ಫ್ರೌಢಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು 1997ರಿಂದ 2010ರವರೆಗೆ ಸರ್ಕಾರಿ ಪದವಿ ಪೂರ್ವ ಕಾಲೇಜು ಸಾಗರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸಿ ನಿವೃತ್ತರಾಗಿದ್ದಾರೆ. ಫೋಟೋಗ್ರಾಫಿಯಲ್ಲಿ ಹೆಚ್ಚು ಆಸಕ್ತಿ ಹೊಂದಿರುವ ಅವರು ...

READ MORE

Related Books