About the Author

ಹಿರಿಯ ಲೇಖಕ ಜಿ.ಎಸ್ ಭಟ್ (ಮೈಸೂರು). 1943, ಮೇ 6 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಜನನ. ತಂದೆ ಸುಬ್ಬರಾಯ ಭಟ್, ತಾಯಿ ಸರಸ್ವತಿ. ಕಲಾವಿದರಾಗಿರುವ ಜಿ.ಎಸ್.ಭಟ್ ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. 

ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಸಾಹಿತಿ ಪ್ರೊ.ದೇಜಗೌ ಅವರಿಂದ ಪ್ರೇರಿತರಾಗಿ 1969ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗಕ್ಕೆ ವಿಶ್ವಕೋಶದ ಸಂಪಾದಕರಾಗಿ ಸೇರಿದರು. ಅಷ್ಟೇ ಅಲ್ಲದೆ ವಿಶ್ವವಿದ್ಯಾನಿಲಯದೊಂದಿಗೆ 33 ವರ್ಷಗಳ ಅವಧಿಯಲ್ಲಿ ವಿಶ್ವಕೋಶದ 14 ಸಂಪುಟಗಳನ್ನು ಹೊರತಂದ ಕೀರ್ತಿಯು ಅವರಿಗೆ ಸಲ್ಲುತ್ತದೆ. ನಿವೃತ್ತಿಯ ನಂತರವೂ ಭಟ್ ಕನ್ನಡ ವಿಶ್ವಕೋಶದ ಕೆಲಸವನ್ನು ಮುಂದುವರೆಸಿದರು. ಯಕ್ಷಗಾನ ಮತ್ತು ಬಯಲಾಟ ಸೇರಿದಂತೆ 75 ಕನ್ನಡ ಕೃತಿಗಳನ್ನು ಹೊಂದಿದ್ದಾರೆ. ಕೆಎಸ್‌ಒಯು ಹೊರತಂದ ತ್ರೈಮಾಸಿಕದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಹೊರತಂದ ಜನಪದ ಕೃತಿಗಳಲ್ಲೂ ತೊಡಗಿಸಿಕೊಂಡಿದ್ದರು. ಮೈಸೂರಿನಲ್ಲಿ ನಡೆದ 9ನೇ ಅಖಿಲ ಭಾರತ ಯಕ್ಷಗಾನ ಮತ್ತು ಬಯಲಾಟ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.

ಕೃತಿಗಳು: ಚಿಟ್ಟಾಣಿ ರಾಮಚಂದ್ರ ಹೆಗಡೆ, ಏಕತೆಯ ಸರ್ದಾರ, ಬಾಳಿಗೆ ಬೆಳಕಾದ ಎಲ್.ಆರ್. ಹೆಗಡೆ, ಕುವೆಂಪು ಅವರ ಹತ್ತು ಕೃತಿಗಳು, ಕುವೆಂಪು ಕೃತಿ ಶೈಲ, ಮೋದಿ ಎಂಬ ವಿಸ್ಮಯ 

ಪ್ರಶಸ್ತಿಗಳು: ಕರ್ನಾಟಕ ಯಕ್ಷಗಾನ ಅಕಾಡೆಮಿಯ ಪಾರ್ತಿಸುಬ್ಬ ಪ್ರಶಸ್ತಿ-2014

 

 

 
 

 









 

 

ಜಿ.ಎಸ್ ಭಟ್ (ಮೈಸೂರು)