About the Author

ಕಾಸರಗೋಡಿನವರಾದ ಗಣರಾಜ ಕುಂಬೈ ಅವರು ಪುತ್ತೂರು ತಾಲ್ಲೂಕಿನ ರಾಮಕುಂಜದ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರು. ಯಕ್ಷಗಾನದಲ್ಲಿ ಅರ್ಥಧಾರಿಗಳೂ, ವೇಷಧಾರಿಗಳೂ ಆಗಿರುವ ಅವರು ಬಿರಿಯುತ್ತಿರುವ ಹೂವು, 'ಅರಳು' ಕವನ ಸಂಕಲನದ ಕವಿ. ಪುಣ್ಯಕೋಟಿ (ಸಾಮಾಜಿಕ), ಮರು ಬಿಂದಿಗೆ (ಪೌರಾಣಿಕ) ನಾಟಕಗಳನ್ನೂ ಪ್ರಕಟಿಸಿದ್ದಾರೆ. 'ಹಾಡುಗಳ ಮಣಿಸರ' ಎಂಬ ಜನಪದ ಹಾಡುಗಳ ಸಂಕಲನಗಳ ಮೂಲಕ ಜಾನಪದ ಪ್ರೀತಿ ತೋರಿದವರು. ಕೋಟೆ ಕ್ಷತ್ರಿಯ ಜನಾಂಗದ ಬಗ್ಗೆ ಸಂಶೋಧನೆ ನಡೆಸಿರುವ ಅವರು ಕುಂಬಾರ ಜನಾಂಗಗಳ ಬಗೆಗೂ ಅಧ್ಯಯನ ಮಾಡಿದ್ದಾರೆ. 'ಚೆನ್ನವೀರ ಕಣವಿ' (ಬದುಕು ಬರೆಹ), 'ತುಳು ವಿಶ್ವರೂಪೊ ದರ್ಶನೊ' (ಅರ್ಥ ಸಹಿತ), ಕೋಟೆ ಕ್ಷತ್ರಿಯು ಜನಾಂಗ' (ಸಂಶೋಧನೆ), 'ಮಚ್ಚಿಮಲೆ ಶಂಕರನಾರಾಯಣ ರಾಯರ ಬಾಲ ಸಾಹಿತ್ಯ' (ಸಂಪಾದನೆ) ಅವರ ಪ್ರಕಟಿತ ಕೃತಿಗಳು.

ಗಣರಾಜ ಕುಂಬೈ