About the Author

ಶರಣ ಸಾಹಿತ್ಯವನ್ನು ಆಳವಾಗಿ ಅಭ್ಯಸಿಸಿ ಹೊಸ ಹೊಳಹನ್ನು ನೀಡಿದವರು ಗಂಗಮ್ಮ ಸತ್ಯಂಪೇಟೆ. ಉಪನ್ಯಾಸಕರಾಗಿದ್ದು, 1957 ಜೂನ್‌ 05 ರಂದು ಹಾಸನದ ಹಂದ್ರಾಳಿನಲ್ಲಿ ಜನಿಸಿದರು. ತಂದೆ ಸಿದ್ದಪ್ಪ, ತಾಯಿ ಮಲ್ಲಮ್ಮ. ’ಅಕ್ಕಮಹಾದೇವಿತ್ವದ ಹಲವು ಎತ್ತರಗಳು, ಮಹಾಮನೆಯ ಮಹಾತಾಯಿ, ಕ್ರಾಂತಿಮಾತೆ, ಮಹಾನುಭಾವಿ ಮಾಚಿತಂದೆ, ಬಸವಣ್ಣನವರ ಕೊನೆಯ ದಿನಗಳು’ ಅವರ ಕೃತಿಗಳು.

’ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಬಹುಮಾನ, ಚಿತ್ತರಗಿ ಇಳಕಲ್ ಪೀಠದಿಂದ 'ವೀರಶೈವ ಸಾಹಿತ್ಯದ ಶ್ರೇಷ್ಠ ಕೃತಿ' ಬಹುಮಾನ, ಗುಲಬರ್ಗಾ ವಿಶ್ವವಿದ್ಯಾಲಯದ ಗ್ರಂಥ ಬಹುಮಾನ. 'ರತ್ನಾಕರವರ್ಣಿ ಮುದ್ದಣ್ಣ ಅನಾಮಿಕ ದತ್ತಿ ಪ್ರಶಸ್ತಿ' ಕನ್ನಡ ಸಾಹಿತ್ಯ ಪರಿಷತ್ತು, ಬಸವ ಸಮಿತಿ ಬೆಂಗಳೂರು ಸಂಸ್ಥೆಯಿಂದ ರಾಜ್ಯೋತ್ಸವ ಸಾಹಿತಿ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಗಂಗಮ್ಮ ಸತ್ಯಂಪೇಟೆ

(05 Jun 1957)