About the Author

ಪಂಪನ ಪುಲಿಗೆರೆಯಾದ ಲಕ್ಷೆಶ್ವರದಲ್ಲಿ (ಗದಗ ಜಿಲ್ಲೆ) ಜನಿಸಿದ ಗೊಪಾಲ ವಾಜಪೇಯಿ (1951) ಅವರು ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ, ರಂಗಭೂಮಿ ಹಾಗೂ ಜಾನಪದಗಳಲ್ಲಿ ಆಸಕ್ತಿ ಹೊಂದಿದ್ದರು. 'ಸಂಯುಕ್ತ ಕರ್ನಾಟಕ', 'ಕರ್ಮವೀರ' ಹಾಗೂ 'ಕಸ್ತೂರಿ' ಪತ್ರಿಕೆಗಳಲ್ಲಿ ಉಪಸಂಪಾದಕ ಸ್ಥಾನದಿಂದ ಸಂಪಾದಕ ಸ್ಥಾನದ ತನಕ ಮೂರು ದಶಕಗಳ ಸೇವೆ ಸಲ್ಲಿಸಿದ್ದರು. ಈ ಟೀವಿ ಕಥಾವಿಭಾಗದ ಸಂಯೋಜಕರಾಗಿ ಆರು ವರ್ಷಗಳ ಸೇವೆ ಸಲ್ಲಿಸಿದ ಅವರು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿದ್ದರು (1987-90). ಗೋಪಾಲ ವಾಜಪೇಯ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಹಾಗೂ ಕರ್ನಾಟಕ ನಾಟಕ ಅಕಾಡೆಮಿಗಳು ಪ್ರಶಸ್ತಿ ನೀಡಿ ಗೌರವಿಸಿವೆ. ಗೋಪಾಲ ವಾಜಪೇಯಿಯವರ ಪ್ರಕಟಿತ ಪುಸ್ತಕಗಳು: ದೊಡ್ಡಪ್ಪ, ನಂದಭೂಪತಿ, ಧರ್ಮ ಪುರಿಯ ಶ್ವೇತವೃತ್ತ, ಸಂತ್ಯಾಗ ನಿಂತಾನ ಕಬೀರ, ಆಗಮನ (ನಾಟಕ ಕೃತಿಗಳು); ಹಾಗೂ 'ರಂಗದ ಒಳಹೊರಗೆ' (ಅನುಭವ ಕಥನ), ಆಕಾಶವಾಣಿ, ರಂಗಭೂಮಿ ಹಾಗೂ ಕಿರುತೆರೆ ಚಲನಚಿತ್ರಗಳಲ್ಲಿ ಸಕ್ರಿಯರಾಗಿರುವ ಅವರು ನಾಟಕಕಾರ, ನಟ, ನಿರ್ದೇಶಕ, ನೇಪಥ್ಯಕರ್ಮಿ, ಸಂಘಟಕ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಪ್ರಸಿದ್ದರು. 'ಸಂತ ಶಿಶುನಾಳ ಶರೀಫ', 'ಸಂಗ್ಯಾಬಾಳ್ಯಾ, 'ನಾಗಮಂಡಲ', 'ಸಂತೆಯಲ್ಲಿ ನಿಂತ ಕಬೀರ' ಇತ್ಯಾದಿ ಹಲವು ಚಲನಚಿತ್ರಗಳಿಗೆ ಸಂಭಾಷಣಕಾರ ರಾಗಿ, ಗೀತರಚನಕಾರರಾಗಿ ಕೆಲಸ ಮಾಡಿ ಸಿ. ಅಶ್ವಥ್‌ರಂಥ ಖ್ಯಾತನಾಮರ ನಿರ್ದೇಶನ ಹಾಗೂ ಧ್ವನಿಗಳಲ್ಲಿ ಇವರ ರಚನೆಯ ಗೀತೆಗಳುಳ್ಳ 'ನಾಗಮಂಡಲ' (ರಂಗಗೀತೆಗಳು), 'ಜೋಡಿ ಜೀವ' (ಕಥನ ಕವನಗಳು), 'ಸಂಗವ್ವಕ್ಕನ ಕಥಿ' (ಜಾನಪದ ಧಾಟಿಯ ಹಾಡುಗಳು) ಮುಂತಾದ ಧ್ವನಿತಟ್ಟೆಗಳು ಹೊರಬಂದು ಜನಪ್ರಿಯವಾಗಿವೆ.

ಗೋಪಾಲ ವಾಜಪೇಯಿ

(01 Jun 1951-20 Sep 2016)