About the Author

ಹೆಚ್. ಬಿ ಚಂದ್ರಶೇಖರ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆಯವರು. ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿ, ಚಳ್ಳಕೆರೆಯಲ್ಲಿ, ಪದವಿ-ಪೂರ್ವ ಶಿಕ್ಷಣವನ್ನು  ದಾವಣಗೆರೆಯಲ್ಲಿ, ಪದವಿ ಹಾಗೂ ಬಿ.ಇಡಿ ಪದವಿ ಚಿತ್ರದುರ್ಗದಲ್ಲಿ ನಂತರ ಎಂ. ಇ.ಡಿ ಪದವಿಯನ್ನು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಶಿಕ್ಷಣದಲ್ಲಿ ಪಿಎಚ್.ಡಿ ಪದವಿಯನ್ನು (ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ) ಪಡೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.

ಕೃತಿಗಳು : ಯಶೋ ತೋಷ, ನೆಲೆ ನಿಂತ ನೆಲವ ನೀ ಬೆಳಗು

ಹೆಚ್. ಬಿ ಚಂದ್ರಶೇಖರ್

(25 Nov 1966)