ಯಶೋ ತೋಷ

Author : ಹೆಚ್. ಬಿ ಚಂದ್ರಶೇಖರ್

Pages 120

₹ 120.00




Year of Publication: 2021
Published by: ಸಾಹಿತ್ಯಲೋಕ ಪಬ್ಲಿಕೇಷನ್ಸ್
Address: #745, 12ನೇ ಮುಖ್ಯ ರಸ್ತೆ, 3ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು-560010
Phone: 9945939436

Synopsys

‘ಯಶೋ ತೋಷ’ ಕೃತಿಯು ಎಚ್. ಬಿ ಚಂದ್ರಶೇಖರ್ ಅವರ ಸಾಧಕರಿಗೊಂದು ಕೈಪಿಡಿ ಕೃತಿಯಾಗಿದೆ.‘ ಕೃತಿಯ ಬೆನ್ನುಡಿಯಲ್ಲಿ ರಾಜಶೇಖರ ಮೂರ್ತಿ ಅವರು, ‘ಯಶೋ ತೋಷ’ ಸಾಧಿಸುವ ಹಂಬಲ ಇರುವ ಯುವ ಮನಸ್ಸುಗಳನ್ನು ಗಮನದಲ್ಲಿಟ್ಟಕೊಂಡು ಬರೆದಿರುವ ಪುಸ್ತಕ. ಸಾಧಕರ ಸಾಧನೆಗಳನ್ನು ನೆನಪಿಸುತ್ತಾ, ಈ ಪುಸ್ತಕವನ್ನು ಸಾಧನೆಯ ಹಾದಿಯಲ್ಲಿ ಬಳಸುವ ಊರುಗೋಲನ್ನಾಗಿಸುವ ಉದ್ದೇಶ ಲೇಖಕರದು. ಈ ಗುರಿಯನ್ನು ಲೇಖಕರು ಸಾಧಿಸಿದ್ದಾರೆ ಎಂದು ಧೈರ್ಯವಾಗಿ ಹೇಳಬಹದು. ಸಾಧನೆಯ ಹಾದಿಯಲ್ಲಿರುವ ಯುವಕರಿಗೆ ಈ ಪುಸ್ತಕ ದಾರಿದೀಪವಾಗಲಿ’ ಎಂದಿದ್ದಾರೆ.

ಕೃತಿಯ ಬೆನ್ನುಡಿಯಲ್ಲಿ ಐ. ಎಂ. ಉಮೇಶ್ ಅವರು, ಸಾಧಕರನ್ನು ಪರಿಚಯಿಸುತ್ತಾ ಲೇಖಕರು ಸಾಧನೆಗೆ parameters ಅನ್ನು ಅತ್ಯುತ್ತಮವಾಗಿ ತಿಳಿಸಿಕೊಟ್ಟಿರುತ್ತಾರೆ. ಎಲ್ಲ ವಯಸ್ಸಿನ ಎಲ್ಲ ವೃತ್ತಿಯ ಜನತೆ ಇದರ ಪ್ರಯೋಜನ ಪಡೆಯಬಹುದು. ಸಾಧಿಸುವ ಮನಸ್ಸಿದ್ದಲ್ಲಿ ಈ ಪುಸ್ತಕವು lunch pad ಆಗುವುದು ಖಚಿತ’ ಎಂದು ಅಭಿಪ್ರಾಯಪಟ್ಟಿದ್ದಾರೆ.  .

About the Author

ಹೆಚ್. ಬಿ ಚಂದ್ರಶೇಖರ್
(25 November 1966)

ಹೆಚ್. ಬಿ ಚಂದ್ರಶೇಖರ್ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹರ್ತಿಕೋಟೆಯವರು. ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪೂರೈಸಿ, ಚಳ್ಳಕೆರೆಯಲ್ಲಿ, ಪದವಿ-ಪೂರ್ವ ಶಿಕ್ಷಣವನ್ನು  ದಾವಣಗೆರೆಯಲ್ಲಿ, ಪದವಿ ಹಾಗೂ ಬಿ.ಇಡಿ ಪದವಿ ಚಿತ್ರದುರ್ಗದಲ್ಲಿ ನಂತರ ಎಂ. ಇ.ಡಿ ಪದವಿಯನ್ನು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಶಿಕ್ಷಣದಲ್ಲಿ ಪಿಎಚ್.ಡಿ ಪದವಿಯನ್ನು (ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ) ಪಡೆದಿರುತ್ತಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಕೃತಿಗಳು : ಯಶೋ ತೋಷ, ನೆಲೆ ನಿಂತ ನೆಲವ ನೀ ಬೆಳಗು ...

READ MORE

Related Books