About the Author

‌ಎಚ್.ಬಿ.ಎಲ್. ರಾವ್ ಅವರು ಯಕ್ಷಗಾನ (ಜನನ: 20-09-1933) ಕಲಾವಿದರು. ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದವರು. ತಂದೆ ಎಚ್.ಪಿ.ರಾವ್, ತಾಯಿ ಸೀತಾರತ್ನ. ಬೆಂಗಳೂರು, ಮದರಾಸು ಹೊಟೇಲುಗಳಲ್ಲಿ.ಕೆಲಸ ಮಾಡಿದರು. ಕೇಂದ್ರ ಸರಕಾರದ ಎಕ್ಸೈಸ್ ಕಮೀಷನರ್ ಕಚೇರಿಯಲ್ಲಿ ಉದ್ಯೋಗ ಸಿಕ್ಕಿತು. ಸಂಸ್ಕೃತ ಮತ್ತು ತತ್ತ್ವಜ್ಞಾನದಲ್ಲಿ ಎಂ.ಎ. ಪದವೀಧರರು. ಮುಂಬೈ ವಿಶ್ವವಿದ್ಯಾಲಯದಿಂದ ಕಾನೂನು ಪದವೀಧರರು.  ‘ಯಕ್ಷಗಾನ ಕವಿಚರಿತೆ’ ವಿಷಯವಾಗಿ ಮುಂಬೈವಿವಿಯಲ್ಲಿ ಹೆಸರು  ನೋಂದಾಯಿಸಿದರೂ ಪದವಿ ಪಡೆಯಲಾಗಲಿಲ್ಲ. ‘ಪದವೀಧರ ಯಕ್ಷಗಾನ ಸಮಿತಿ ಸ್ಥಾಪಿಸಿದರು. ಯಕ್ಷಗಾನ ಸಮ್ಮೇಳನಗಳು. ಯಕ್ಷಗಾನ ಕಲಾವಿದರನ್ನು ಕರೆಸಿ ಸನ್ಮಾನ.

ಕೃತಿಗಳು : ಯಕ್ಷಗಾನ ಮುಖವರ್ಣಿಕೆ, ಔರ್ಧ್ವ ದೇಹಿಕ ವಿ, ಶಿವಳ್ಳಿ ಬ್ರಾಹ್ಮಣರು ಭಾಗ-1, ನಮನ, ಶಿವಳ್ಳಿ ಬ್ರಾಹ್ಮಣರು ಭಾಗ-2, ಅವಲೋಕನ, ಮುಂಬೈ ಕನ್ನಡಿಗರ ಸಿದ್ಧಿ ಮತ್ತು ಸಾಧನೆ, 70ರ ಸಂಭ್ರಮಕ್ಕೆ ಬರೆದು ಪ್ರಕಟಿಸಿದ ಕಾವ್ಯಮಯ ಆತ್ಮವೃತ್ತ ‘ಸಪ್ತ ಛಂದೋಗತಿಯ ಸಪ್ತತಿ ಗೀತೆಗಳು’, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ಹೊರನಾಡ ಕನ್ನಡಿಗರ ಪ್ರಶಸ್ತಿ, ವಿಶ್ವೇಶ್ವರಯ್ಯ ದಶಮಾನೋತ್ಸವ ಪ್ರಶಸ್ತಿ. ಬೆಳಗಾವಿಯಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ‘ಕರ್ನಾಟಕ ಸಾಹಿತ್ಯ ಶ್ರೀ’ ಪ್ರಶಸ್ತಿ ಲಭಿಸಿವೆ.

ಎಚ್.ಬಿ.ಎಲ್. ರಾವ್

(20 Sep 1933)